ಪಣಜಿ: ಕರಾವಳಿ ರಾಜ್ಯ ಗೋವಾದ ಸರ್ಕಾರಿ ಪ್ರದೇಶದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಸದಾ ವಿವಾದಗಳ ಮೂಲಕವೇ ಸದ್ದು ಮಾಡುವ ಪೂನಂ ಪಾಂಡೆ, ಗೋವಾದ ಚಾಪೋಲಿ ಡ್ಯಾಂ ಬಳಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದನ್ನು ಪೊಲೀಸರು ಗುರುತಿಸಿದ್ದರು. ಸರ್ಕಾರದ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯೊಂದಿಗೆ ನಟಿ ಪೂನಂ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಗೋವಾ ಸಂಸ್ಕೃತಿ, ಚಾಪೋಲಿ ಡ್ಯಾಂ ಪವಿತ್ರತೆಗೆ ಧಕ್ಕೆ ತರುವಂತೆ ವರ್ತಿಸಿದ ಕಾರಣ ಪ್ರಕರಣ ದಾಖಲಿಸಿದ್ದೇವೆ ಎಂದು ಗೋವಾ ಫಾರ್ವಡ್ ಪಾರ್ಟಿ ಮಹಿಳಾ ವಿಭಾಗ ಮಾಹಿತಿ ನೀಡಿತ್ತು.
Advertisement
Advertisement
ಪೂನಂ ಲಾಕ್ಡೌನ್ ಅವಧಿಯಲ್ಲಿ ತನ್ನ ಪ್ರಿಯಕರ ಸ್ಯಾಮ್ ದಾಂಬೆನನ್ನು ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಒಂದು ತಿಂಗಳಿನಲ್ಲೇ ಗಂಡ ಹಿಂಸೆ ನೀಡುತ್ತಿದ್ದಾನೆ ಎಂದು ಪೂನಂ ಆರೋಪಿಸಿದ್ದರು. ಅಲ್ಲದೇ ಪೊಲೀಸರು ಸೆ.22 ರಂದು ಪೂನಂ ಪತಿಯನ್ನು ಬಂಧಿಸಿದ್ದರು. ಇದಾದ ವಾರದ ಬಳಿಕ ಮತ್ತೆ ಮನಸ್ಸು ಬದಲಿಸಿದ್ದ ಪೂನಂ, ಪತಿಯ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದು ಪತಿಯೊಂದಿಗೆ ಹೊಸ ಜೀವನ ಆರಂಭಿಸಿದ್ದರು. ಸದ್ಯ ಈ ದಂಪತಿ ಗೋವಾ ಪ್ರವಾಸದಲ್ಲಿದ್ದು, ಇದೇ ವೇಳೆ ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೀಚಿನಲ್ಲಿ ಬೆತ್ತಲೆಯಾಗಿ ಓಡಿ 55ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಮಿಲಿಂದ್