ಚಿಕ್ಕಬಳ್ಳಾಪುರ/ಮಡಿಕೇರಿ: ಲಾಕ್ಡೌನ್ನಲ್ಲಿ ಮನೆಯಲ್ಲೇ ಇದ್ದು ಇದ್ದೂ ಬೇಜಾರ್ ಆಗಿದ್ದ ಜನ ಅನ್ಲಾಕ್ ಬಳಿಕ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದರಲ್ಲೂ ಫೇವರೇಟ್ ಸ್ಪಾಟ್ಗಳಲ್ಲಿ ಜನ ಕಿಕ್ಕಿರಿದು ತುಂಬುತ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಜನರ ಸಂಖ್ಯೆ ನೋಡುತ್ತಿದ್ರೆ ಕೊರೊನಾ ಸಂಖ್ಯೆ ಹೆಚ್ಚಳವಾಗಲು ಈ ಬೆಸ್ಟ್ ಪ್ಲೇಸ್ಗಳೇ ಕಾರಣವಾಗುತ್ತಿವೆಯಾ ಅನ್ನೋ ಅನುಮಾನ ಈಗ ವ್ಯಕ್ತವಾಗುತ್ತಿದೆ.
Advertisement
ಲಾಕ್ಡೌನ್ನಲ್ಲಿ ಮನೆಯಲ್ಲೇ ಕೂತು ಕೂತು ಕಂಗಾಲಾಗಿದ್ದ ಜನ ಅನ್ಲಾಕ್ ಬಳಿಕ ಪ್ರವಾಸಿ ತಾಣಗಳಿಗೆ ಲಗ್ಗೆಯಿಡುತ್ತಿದ್ದಾರೆ. ನಂದಿ ಗಿರಿಧಾಮಕ್ಕಂತೂ ನಿರೀಕ್ಷೆಗೂ ಮೀರಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅದರಲ್ಲೂ ವಿಕೇಂಡ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗ್ತಿದೆ.
Advertisement
Advertisement
ನಂದಿ ಹಿಲ್ಸ್ನಲ್ಲಿ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಪಾಲಿಸುವಂತೆ ಮೈಕ್ ಮೂಲಕ ಸೂಚಿಸಲಾಗ್ತಿದೆ. ಆದರೆ ಪ್ರವಾಸಿಗರು ಮಾತ್ರ ತಲೆಕೆಡಿಸಿಕೊಳ್ತಾನೆ ಇಲ್ಲ. ಇದು ಸೋಂಕು ಭೀತಿ ತಂದೊಡ್ಡಿದೆ. ಹೀಗಾಗಿ ನಂದಿಗಿರಿಧಾಮಕ್ಕೆ ಇಂತಿಷ್ಟೇ ಅಂತ ವಾಹನಗಳನ್ನ ಬಿಡುವ ಮೂಲಕ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
Advertisement
ಇತ್ತ ಮಡಿಕೇರಿಯ ಹಾರಂಗಿ ಜಲಾಶಯದಲ್ಲೂ ಇದೇ ಸ್ಥಿತಿ ಇದೆ. ಜನ ಸಿಕ್ಕಾಪಟ್ಟೆ ಲಗ್ಗೆ ಇಡ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಾರಂಗಿ ಡ್ಯಾಂ ಮುಂಭಾಗದ ಉದ್ಯಾನವನವನ್ನು ಬಂದ್ ಮಾಡಲಾಗಿದೆ. ಪ್ರವಾಸಿಗರು ನೋ ಎಂಟ್ರಿ ಬೋರ್ಡ್ ನೋಡಿ ಬೇಸರದಿಂದ ವಾಪಸ್ ಆಗುತ್ತಿದ್ದಾರೆ. ಇದು ವ್ಯಾಪಾರಿಗಳಿಗೆ ದೊಡ್ಡ ಹೊಡೆತ ನೀಡಿದೆ.
ಪ್ರವಾಸ ಒಳ್ಳೆಯದೇ, ಆದರೆ ಕೊರೊನಾ ಮರೆತು ಎಂಜಾಯ್ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.