-ಗುಣಮುಖ ಪ್ರಮಾಣ ಶೇ.73.90ಕ್ಕೆ ಏರಿಕೆ
ನವದೆಹಲಿ: ದೇಶದಲ್ಲಿಂದು ಮಹಾಮಾರಿ ಕೊರೊನಾ ವೈರಸ್ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 69,952 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,36,926ಕ್ಕೆ ಏರಿಕೆಯಾಗಿದೆ. ಜೊತೆ ಕೊರೊನಾದಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ.73.90ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದುವರೆಗೂ 20.96 ಲಕ್ಷ ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಕೊರೊನಾಗೆ 977 ಸಾವಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 53,866ಕ್ಕೆ ಏರಿಕೆ ಕಂಡಿದೆ.
Advertisement
Spike of 69,652 cases and 977 deaths reported in India, in the last 24 hours.
The #COVID19 tally in the country rises to 28,36,926 including 6,86,395 active cases, 20,96,665 cured/discharged/migrated & 53,866 deaths: Ministry of Health and Family Welfare pic.twitter.com/1RWro1WWpE
— ANI (@ANI) August 20, 2020
Advertisement
ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ನಿನ್ನೆ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ (6,28,642) ಕೊರೊನಾ ಪೀಡಿತ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಉಳಿದಂತೆ ತಮಿಳುನಾಡು (3,55,449), ಆಂಧ್ರ ಪ್ರದೇಶ (3,16,003), ಕರ್ನಾಟಕ (2,49,590) ಉತ್ತರ ಪ್ರದೇಶ (1,67,510) ಮತ್ತು ದೆಹಲಿ (1,56,139) ಕ್ರಮವಾಗಿ ಮೊದಲ ಆರು ಸ್ಥಾನಗಳಲ್ಲಿವೆ. ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
Advertisement
#CoronaVirusUpdates:#COVID19 testing status update:@ICMRDELHI stated that 03,26,61,252 samples tested upto August 20, 2020
09,18,470 sample tested on August 20, 2020#StaySafe #IndiaWillWin pic.twitter.com/zFIV5KtFft
— #IndiaFightsCorona (@COVIDNewsByMIB) August 20, 2020