ನವದೆಹಲಿ: ಚೀನಿ ವೈರಸ್ ಕೋವಿಡ್ 19 ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಸೋಂಕಿರ ಸಂಖ್ಯೆ 59 ಲಕ್ಷದ ಗಡಿ ದಾಟಿದೆ. ಒಂದೇ ದಿನ 85,362 ಮಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 59,03,933ಕ್ಕೆ ಏರಿಕೆಯಾಗಿದೆ.
India's #COVID19 case tally crosses 59-lakh mark with a spike of 85,362 new cases & 1,089 deaths in last 24 hours.
The total case tally stands at 59,03,933 including 9,60,969 active cases, 48,49,585 cured/discharged/migrated & 93,379 deaths: Ministry of Health & Family Welfare pic.twitter.com/fTL9qjTu8p
— ANI (@ANI) September 26, 2020
Advertisement
ಕಳೆದ 24 ಗಂಟೆಯಲ್ಲಿ 1,089 ಮಂದಿ ಸಾವನ್ನಪ್ಪಿದ್ದಾರೆ. ಇದೂವರೆಗೂ ದೇಶದಲ್ಲಿ 93,379 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 59,03,933 ಸೋಂಕಿತರ ಪೈಕಿ 9,60,969 ಸಕ್ರಿಯ ಪ್ರಕರಣಗಳಿದ್ದು, 48,49,585 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Advertisement
Advertisement
ದೇಶದಲ್ಲಿ ನಿನ್ನೆ ಒಂದೇ ದಿನ 13,41,535 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 7,02,69,975 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
Advertisement
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/dTPdJKPpcn
— ICMR (@ICMRDELHI) September 26, 2020