ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಬೀಚ್ನಲ್ಲಿ ಕುಳಿತು ಫೊಟೋ ಪೋಸ್ ಕೊಟ್ಟ ಹಾಟ್ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Advertisement
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಿಶಾ ಪಟಾನಿಯ ಇನ್ಸ್ಟಾಗ್ರಾಮ್ನಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬೀಚ್ನಲ್ಲಿ ಬಿಕಿನಿ ಧರಿಸಿ ದಿಶಾ ಪಟಾನಿ ತೆಗೆಸಿಕೊಂಡಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.
Advertisement
View this post on Instagram
Advertisement
ಎಂ.ಎಸ್. ಧೋನಿ, ರಾಧೆ ಸಿನಿಮಾ ಖ್ಯಾತಿಯ ದಿಶಾ ಪಟಾನಿಗೆ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಕೊರೊನಾ ಹಾವಳಿಯಿಂದಾಗಿ ಶೂಟಿಂಗ್ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ನಡುವೆ ಹಾಟ್ ಫೋಟೋಶೂಟ್ ಪೋಸ್ ಕೊಟ್ಟ ಫೋಟೋಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.
Advertisement
View this post on Instagram
ಉತ್ತರಾಖಂಡ ಮೂಲದ ದಿಶಾ ಪಟಾನಿ ಹುಟ್ಟಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿನ ರಜಪೂತ್ ಮನೆತನದಲ್ಲಾಗಿದೆ. ದಿಶಾ ಪಟಾನಿ ಅವರ ತಂದೆ ಪೊಲೀಸ್ ಆಫೀಸರ್ ಆಗಿದ್ದಾರೆ. ದಿಶಾ ಪಟಾನಿ ಮೊದಲು ಅಭಿನಯಿಸಿದ ಸಿನಿಮಾ ತೆಲುಗು ಭಾಷೆಯ ಲೋಫರ್. ವರುಣ್ ತೇಜ ಜೊತೆ ನಾಯಕಿಯಾಗಿ ದಿಶಾ ಅಭಿನಯಿಸಿದ ಈ ಸಿನಿಮಾ ಆಕೆಗೆ ಭಾರೀ ಹೆಸರು ತಂದುಕೊಟ್ಟಿತು.
View this post on Instagram
ಎಂ.ಎಸ್. ಧೋನಿ, ಅನ್ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೋಡಿಯಾಗಿ ನಟಿಸಿದ ದಿಶಾ ಪಟಾನಿಗೆ ಆ ಸಿನಿಮಾ ದೊಡ್ಡ ಬ್ರೇಕ್ ನೀಡಿತು. ಜಾಕಿ ಚಾನ್ ಅವರ ಕುಂಗ್ ಫು ಯೋಗ ಸಿನಿಮಾದಲ್ಲಿ ದಿಶಾ ಪಟಾನಿ ಸೋನು ಸೂದ್ಗೆ ಜೊತೆಯಾಗಿ ನಟಿಸಿದ್ದಾರೆ. ಬಾಘಿ ಸಿನಿಮಾದಲ್ಲಿ ಟೈಗರ್ ಶ್ರಾಫ್ ಜೊತೆ ತೆರೆ ಹಂಚಿಕೊಂಡಿದ್ದ ದಿಶಾ ಪಟಾನಿ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸಿನಿಮಾಗಳ ಮೂಲಕವಾಗಿ ಸುದ್ದಿ ಮಾಡುವ ದಿಶಾ ಪಟಾನಿ ಇದೀಗ ಹಾಟ್ ಫೋಟೋ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.