ಚಾಮರಾಜನಗರ: ದಯಾಮರಣ ಕೋರಿ ರೈತ ಕುಟುಂಬ ಜಿಲ್ಲಾಡಳಿತ ಭವನದ ಮುಂದೆ ಧರಣಿ ಕುಳಿತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಇದನ್ನೂ ಓದಿ: ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ
Advertisement
ಗುಂಡ್ಲುಪೇಟೆಯ ಮಾಡ್ರಹಳ್ಳಿಯ ಎಂ.ನವೀನ, ಸಹೋದರ ಮಾದಪ್ಪ, ತಾಯಿ ಮಹಾದೇವಮ್ಮ ಎಂಬುವರು ಜಿಲ್ಲಾಡಳಿತ ಭವನದ ಮುಂದೆ ಗಾಂಧೀಜಿ ಫೋಟೋ ಇಟ್ಟು ಧರಣಿ ನಡೆಸಿದ್ದಾರೆ. ತಮ್ಮ ತಂದೆ ಹಾಗೂ ಎರಡನೇ ಹೆಂಡತಿ ಮಕ್ಕಳು ಕಿರುಕುಳ ನೀಡುತ್ತಿದ್ದಾರೆ. ನಮಗೆ ದಯಾಮರಣ ನೀಡಿ ಎಂದು ಧರಣಿ ಮಾಡಿದ್ದಾರೆ. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ
Advertisement
Advertisement
ತಮ್ಮ ಹೆಸರಿನಲ್ಲಿರುವ ಜಮೀನಿನನಲ್ಲಿ ಉಳುಮೆ ಮಾಡಲು ಹೋದರೆ ಹಲ್ಲೆ ಮಾಡುತ್ತಿದ್ದಾರೆ. ಪದೇಪದೇ ಅಡ್ಡಿಪಡಿಸುತ್ತಾ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ದೂರು ನೀಡಿದರು ತಮಗರ ರಕ್ಷಣೆ ಸಿಗುತ್ತಿಲ್ಲ, ತಮಗೆ ದಯಾಮರಣ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.
Advertisement