ಬೆಂಗಳೂರು: “ಭವಿಷ್ಯದಲ್ಲಿ ನೀನು ನಟನಾಗುತ್ತಿಯಾ” ಎಂದು ಭವಿಷ್ಯ ನುಡಿದಿದ್ದ ಗುರುಗಳು ನಿಧನರಾಗಿದ್ದಕ್ಕೆ ಜಗ್ಗೇಶ್ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.
Advertisement
ಸ್ಯಾಂಡಲ್ವುಡ್ನ ನವರಸನಾಯಕನಾಗಿ ಮಿಂಚುತ್ತಿರುವ ಅಭಿಮಾನಿಗಳ ಪ್ರೀತಿಯ ಜಗ್ಗೇಶ್ ಅವರು ಚಿಕ್ಕವರಿದ್ದಾಗಲೇ ಅವರಿಲ್ಲಿರುವ ಕಲೆಯನ್ನು ಗುರುತಿಸಿ ಬೆನ್ನು ತಟ್ಟಿದ್ದ ಗುರುಗಳನ್ನು ಜಗ್ಗೇಶ್ ಅವರು ನೆನಪು ಮಾಡಿಕೊಂಡಿದ್ದಾರೆ.
Advertisement
ನನಗೆ ಗಣಿತ ವಿಜ್ಞಾನ ಪಾಠ ಮಾಡಿ ಹಾಗು ಒಂದಲ್ಲಾ ಒಂದುದಿನ ಇವನು ಕಲಾವಿದ ಆಗುತ್ತಾನೆ ಎಂದು ನಾನು 8ನೆ ಕ್ಲಾಸಿನಲ್ಲಿ ಇರಬೇಕಾದರೆ ಭವಿಷ್ಯ ನುಡಿದಿದ್ದ ಗುರುಗಳು march18 ಶಿವನಲ್ಲಿ ಲೀನವಾದರು ನಮ್ಮ #MRM SIR..#BPIHS ಶಾಲೆ ಮಲ್ಲೇಶ್ವರದ ಹೆಮ್ಮೆಯ ಪ್ರಾಧ್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರಗೌಡ???? ಓಂಶಾಂತಿ.. pic.twitter.com/CV7QYOvpbz
— ನವರಸನಾಯಕ ಜಗ್ಗೇಶ್ (@Jaggesh2) March 19, 2021
Advertisement
ನನಗೆ ಗಣಿತ, ವಿಜ್ಞಾನವನ್ನು ಪಾಟ ಮಾಡಿದ ಹಾಗೂ ಒಂದಲ್ಲಾ ಒಂದು ದಿನ ನೀನು ಕಲಾವಿದನಾಗುತ್ತಿಯಾ ಎಂದು ನಾನು 8ನೇ ತರಗತಿ ಇರುವಾಗಲೇ ಭವಿಷ್ಯ ನುಡಿದಿದ್ದ ನನ್ನ ಗುರುಗಳಾದ ಎಂ.ರಾಮಮೂರ್ತಿ ಸರ್ ಮಾರ್ಚ್ 18 ರಂದು ಶಿವನಲ್ಲಿ ಲೀನವಾಗಿದ್ದಾರೆ. ಮಲ್ಲೇಶ್ವರದ ಹೆಮ್ಮೆಯ ಪ್ರಾಧ್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರ ಗೌಡ..ಓಂ ಶಾಂತಿ ಎಂದು ಬರೆದುಕೊಂಡು ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.
Advertisement