ಚಿಕ್ಕಬಳ್ಳಾಪುರ: ಆಸ್ತಿವಿವಾದ-ಅಣ್ಣ ತಮ್ಮಂದಿರ ಮೇಲಿನ ಕೋಪಕ್ಕೆ ಮನನೊಂದ ವ್ಯಕ್ತಿಯೋರ್ವ ತನಗೆ ತಾನೇ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಕಚೇರಿ ಎದುರು ನಡೆದಿದೆ.
ಈ ದೃಶ್ಯ ತಾಲೂಕು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಗಸಂದ್ರ ಗ್ರಾಮದ ಜಗನ್ನಾಥ್ ಇರಿದುಕೊಂಡ ವ್ಯಕ್ತಿ. ಸದ್ಯ ಗಾಯಾಳು ಜಗನ್ನಾಥ್ ಗೆ ಗೌರಿಬಿದನೂರು ತಾಲೂಕಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಜಗನ್ನಾಥ್ ಹಾಗೂ ಐದು ಮಂದಿ ಸಹೋದರರ ಆಸ್ತಿ ಹಂಚಿಕೆ ಮಾಡಿಕೊಂಡು ವಿಭಾಗ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಲು ಬಂದು ತಾಲೂಕು ಕಚೇರಿ ಬಳಿ ಮಾತನಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಜಗನ್ನಾಥ್ ಕೋಪಗೊಂಡು ಏಕಾಏಕಿ ಚಾಕುವಿನಿಂದ ತನಗೆ ತಾನೇ ಚಾಕುವಿನಿಂದ ಹೊಟ್ಟೆ ಎದೆ ಭಾಗಕ್ಕೆ ಇರಿದುಕೊಂಡು ತನ್ನ ಆಕ್ರೋಶ ಹೊರಹಾಕಿದ್ದಾನೆ. ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.