ಕಿನ್ನರಿ ಧಾರಾವಾಹಿ ಹಾಗೂ ಬಿಗ್ಬಾಸ್ ಸೀಸನ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅವರ ಹೊಸ ಪ್ರಾಜೆಕ್ಟ್ ಹಾಗೂ ಬಿಗ್ಬಾಸ್ ನಂತರದ ಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
Advertisement
• ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್?
ನಾನು ಸೂಪರ್ ಆಗಿದ್ದೀನಿ. ಲೈಫ್ ಬೊಂಬಾಟ್ ಆಗಿದೆ. ಬಿಗ್ಬಾಸ್ನಿಂದ ಬಂದ ಮೇಲೆ ಒಂದಿಷ್ಟು ಹೊಸ ಹೊಸ ಅವಕಾಶಗಳು ಸಿಕ್ತಿವೆ. ಸದ್ಯಕ್ಕೆ ಕೊರೊನಾದಿಂದ ಪಾರಾದ್ರೆ ಸಾಕಾಗಿದೆ.
Advertisement
Advertisement
• ಬಿಗ್ಬಾಸ್ ಮುಗಿದ ನಂತರ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ್ರಾ?
ಅವಕಾಶಗಳು ಬರ್ತಾ ಇದೆ. ಒಂದಿಷ್ಟು ಶೋಗಳು ಬಂದಿವೆ ಫೈನಲ್ ಆದ ಬಳಿಕ ತಿಳಿಸುತ್ತೇನೆ. ಸದ್ಯಕ್ಕೆ ಧಾರಾವಾಹಿ ಬಿಟ್ಟು ಸಿನಿಮಾ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಅನ್ಲಾಕ್ ಮೂರನೇ ಹಂತದಲ್ಲಿ ಒಂದು ಸಿನಿಮಾ ಒಪ್ಪಿಕೊಂಡೆ. ಇಕ್ಕಟ್ ಎಂದು ಆ ಸಿನಿಮಾ ಹೆಸರು. ಕಾಮಿಡಿ ಥ್ರಿಲ್ಲರ್ ಇರೋ ಸಿನಿಮಾ. ಇದು ನನ್ನ ಮೊದಲ ಸಿನಿಮಾ. ಶೂಟಿಂಗ್ ಕಂಪ್ಲೀಟ್ ಆಗಿ ಡಬ್ಬಿಂಗ್ ಕೂಡ ಮುಗಿದಿದೆ. ನಾಗ್ ಭೂಷಣ್ ಸರ್ ಹಾಗೂ ನಾನು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ.
Advertisement
• ಎಜುಕೇಷನ್ ಅರ್ಧಕ್ಕೆ ನಿಲ್ಲಿಸಿದ್ದೀರಾ ಪೂರ್ಣ ಮಾಡೋ ಯೋಚನೆ ಇದಿಯಾ?
ನಾನು ಎಂಜಿನಿಯರಿಂಗ್ ಅರ್ಧಕ್ಕೆ ನಿಲ್ಲಿಸಿದೆ. ನಟನೆ ಮಾಡೋ ಆಸೆಯಿಂದ ಎಜುಕೇಶನ್ಗೆ ಫುಲ್ ಸ್ಟಾಪ್ ಇಟ್ಟೆ. ಅದನ್ನು ಪೂರ್ಣ ಮಾಡೋ ಬಗ್ಗೆ ಈಗ ಯೋಚನೆ ಇಲ್ಲ. ನನಗೆ ನಾನು ಎಲ್ಲಿ ಹೋದ್ರು ಸರ್ವೈವ್ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಇದೆ. ಡಿಗ್ರಿ ಇದ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಆಗುತ್ತೆ ಅನ್ನೋದು ನನ್ನ ಪ್ರಕಾರ ತಪ್ಪು. ಓದು ಜೀವನವನ್ನ ಹೇಳಿಕೊಡೋದಿಲ್ಲ. ಜೀವನಕ್ಕೆ ಏನ್ ಬೇಕು ಅದನ್ನ ನಾವು ಕಲಿತುಕೊಂಡಿರಬೇಕು, ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು. ಎಲ್ಲಿ ಹೋದ್ರು ಬದುಕಿ ಬರೋವಷ್ಟು ಧೈರ್ಯ, ಸಾಧಿಸಿ ಬರುವ ಛಲ ನನಗಿದೆ. ಹಾಗಂತ ಓದಬೇಡಿ ಅಂತ ನಾನು ಯಾರಿಗೂ ಹೇಳೋದಿಲ್ಲ. ನಮಗೆ ಏನ್ ಖುಷಿ ಕೊಡುತ್ತೆ ಅದನ್ನ ಮಾಡಬೇಕು ಅದು ನನ್ನ ಪಾಲಿಸಿ.
• ನಿಮ್ಮ ಕನಸುಗಳೇನು. ಏನಾಗಬೇಕು ಅನ್ನೋದು ನಿಮ್ಮ ಆಸೆ?
ನನಗೆ ಇಂತಹದ್ದೇ ಕನಸು ಅಂತ ಏನಿಲ್ಲ. ಜೀವನ ಹೇಗೆ ಬರುತ್ತೋ ಆ ರೀತಿ ಸ್ವೀಕರಿಸುತ್ತೇನೆ. ನನ್ನ ಮನಸ್ಸಿಗೆ ಸರಿ ಅನ್ಸಿದ್ದನ್ನ ನಾನು ಮಾಡುತ್ತೇನೆ. ಫೈನಲ್ ಆಗಿ ನಾನು ಮಾಡೋ ಕೆಲಸ ನನ್ನ ಮನಸ್ಸಿಗೆ ಖುಷಿ, ತೃಪ್ತಿ ನೀಡಬೇಕು ಅಷ್ಟೇ. ಇದನ್ನೇ ಮಾಡಬೇಕು, ನಾನು ಹೀಗೆ ಆಗಬೇಕು ಅನ್ನೋದು ಏನಿಲ್ಲ.
• ನಿಮಗೆ ಬೈಕ್ ರೈಡಿಂಗ್ ಅಂದ್ರೆ ಬಹಳ ಇಷ್ಟ ಅಂತೆ ಹೌದಾ?
ಹೌದು..ನನಗೆ ತುಂಬಾ ಇಷ್ಟ. ಬೈಕ್ ರೈಡ್ ಮಾಡಿಕೊಂಡು ಟ್ರಾವೆಲ್ ಮಾಡಬೇಕು ಅನ್ನೋ ಆಸೆ ಒಂದಿದೆ. ಇಷ್ಟು ವರ್ಷ ಶೂಟಿಂಗ್ ಶೂಟಿಂಗ್ ಅಂತ ಬ್ಯುಸಿ ಇದ್ದೆ. ಆದ್ರೀಗ ಅದೆಲ್ಲವನ್ನು ಒಂದೊಂದಾಗಿ ಈಡೇರಿಸಿಕೊಳ್ಳಬೇಕು. ಸದ್ಯದಲ್ಲೇ ಹೊಸ ಬೈಕ್ ತೆಗೆದುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಅದರಲ್ಲಿ ಎಲ್ಲ ಕಡೆ ಟ್ರಾವೆಲ್ ಮಾಡಬೇಕು ಅಂದ್ಕೊಡಿದ್ದೀನಿ.
• ಬಿಗ್ಬಾಸ್ ಶೋ ಮಿಸ್ ಮಾಡಿಕೊಳ್ತೀರಾ?
ಖಂಡಿತಾ, ಬಿಗ್ಬಾಸ್ ಶೋ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅದೊಂದು ನೆನಪುಗಳ ಹೂರಣ. ಅದನ್ನು ನಾನು ಯಾವಾಗಲೂ ಮರೆಯೋದಿಲ್ಲ. ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಅಲ್ಲಿ ಮಾಡಿದ ಟಾಸ್ಕ್ಗಳು, ತರ್ಲೆ, ತುಂಟಾಟಗಳನ್ನು ಈಗಲೂ ನೆನಪು ಮಾಡಿಕೊಂಡು ನಗುತ್ತೇನೆ. ಲಾಕ್ಡೌನ್ ಟೈಂನಲ್ಲಿ ಬಿಗ್ಬಾಸ್ ಶೋ ತುಂಬಾ ಮಿಸ್ ಮಾಡಿಕೊಂಡೆ. ಈ ಟೈಂನಲ್ಲಿ ಬಿಗ್ಬಾಸ್ ಇರಬಾರದಿತ್ತಾ ಎಂದು ತುಂಬಾ ಅಂದ್ಕೊಳ್ತಾ ಇದ್ದೆ.
• ಬಿಗ್ಬಾಸ್ ಮುಗಿದ ಮೇಲೆ ಎಲ್ಲರೂ ಭೇಟಿಯಾಗಿದ್ರಾ?
ಹೌದು, ಭೇಟಿಯಾಗ್ತಾನೆ ಇರ್ತೀವಿ. ಒಮ್ಮೊಮ್ಮೆ ಎಲ್ಲರೂ ಸಿಗಲು ಆಗೋದಿಲ್ಲ. ಆದ್ರೆ ಎಲ್ಲರೂ ಸಂಪರ್ಕದಲ್ಲಿದ್ದೇವೆ. ಭೇಟಿಯಾದಾಗ ಬಿಗ್ಬಾಸ್ನಲ್ಲಿ ಮಾಡಿದ ಟಾಸ್ಕ್, ತಮಾಷೆಗಳ ಬಗ್ಗೆ ಮಾತನಾಡುತ್ತೇವೆ. ಒಬ್ಬರನ್ನೊಬ್ಬರು ರೇಗಿಸಿಕೊಳ್ಳುತ್ತೇವೆ. ಇತ್ತೀಚೆಗಷ್ಟೇ ಶೈನ್ ಶೆಟ್ಟಿ ಗಲ್ಲಿ ಕಿಚನ್ ಓಪನ್ ಮಾಡುವಾಗ ಎಲ್ಲರೂ ಭೇಟಿಯಾಗಿದ್ವಿ.
• ಕಿನ್ನರಿ ಧಾರಾವಾಹಿ ನಿಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಏನ್ ಹೇಳ್ತೀರಾ ಇದ್ರ ಬಗ್ಗೆ?
ಸಿನಿಮಾ ಮತ್ತು ಸೀರಿಯಲ್ ಒಂದು ಬೇರೇಯದ್ದೇ ಪ್ರಪಂಚ ಆ ಪ್ರಪಂಚವನ್ನ ನನಗೆ ಕಿನ್ನರಿ ಪರಿಚಯಿಸಿತು. ಕಿನ್ನರಿ ಧಾರಾವಾಹಿ ಮಣಿ ಆಗಿ, ಬಿಗ್ಬಾಸ್ ಶೋ ಭೂಮಿ ಶೆಟ್ಟಿಯಾಗಿ ನನ್ನನ್ನು ಪರಿಚಯಿಸಿತು. ಹೊಸ ಪ್ರಪಂಚವನ್ನು ಕಿನ್ನರಿ ಧಾರಾವಾಹಿ ನನ್ನ ಮುಂದೆ ತೆರೆದಿಡ್ತು. ನನ್ನ ಪಾತ್ರದಿಂದ ಜನಪ್ರಿಯತೆಯೂ ಸಿಕ್ತು. ಬಿಗ್ಬಾಸ್ ಶೋಗೆ ಹೋಗಲು ಅವಕಾಶ ಕೂಡ ಮಾಡಿಕೊಡ್ತು. ಜನ ಎಲ್ಲೇ ಹೋದ್ರು ಕಿನ್ನರಿ ಮಣಿ ಅಂತಾನೇ ಗುರುತಿಸುತ್ತಾರೆ. ಈಗಲೂ ಅಷ್ಟೇ ಒಂದಿಷ್ಟು ಅವಕಾಶಗಳು ಸಿಗ್ತಿವೆ ಅಂದ್ರೆ ಅದು ಕಿನ್ನರಿ ಧಾರಾವಾಹಿಯಿಂದ ಸಿಕ್ಕ ಖ್ಯಾತಿಯಿಂದ. ಆ ಬಗ್ಗೆ ನನಗೆ ಹೆಮ್ಮೆ ಇದೆ.
• ನೀವು ಗದ್ದೆ ನಾಟಿ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಮೊದಲಿನಿಂದಲೂ ಕೆಲಸ ಮಾಡಿ ಅಭ್ಯಾಸ ಇತ್ತಾ?
ಹೌದು, ಆ ವಿಡಿಯೋ ತುಂಬಾ ವೈರಲ್ ಆಗಿತ್ತು. ಅನ್ಲಾಕ್ ಆದಾಗ ಊರಿಗೆ ಹೊಗಿದ್ದೆ. ಆ ಸಮಯದಲ್ಲಿ ಗದ್ದೆ ಕೆಲಸ ನಡೆಯುತ್ತಿತ್ತು ನಾನು ಗದ್ದೆಗಿಳಿದು ನಾಟಿ ಮಾಡಿದೆ. ಇದ್ರಿಂದ ನನ್ನ ಪೋಷಕರಿಗೂ ಸಹಾಯ ಆಯ್ತು. ನಮ್ಮನೆ ಕೆಲಸ ನಾವು ಮಾಡೋದ್ರಲ್ಲಿ ತಪ್ಪೇನಿದೆ ಅನ್ನೋದು ನನ್ನ ಭಾವನೆ. ಮೊದಲಿನಿಂದಲೂ ಮಾಡಿ ಅಭ್ಯಾಸ ಇರಲಿಲ್ಲ. ಆದ್ರೆ ಕೆಲಸದ ಬಗ್ಗೆ ಗೊತ್ತಿತ್ತು. ನಾನು ಹುಟ್ಟಿ ಬೆಳೆದಿದ್ದು ಅಲ್ಲೆ ಆದ್ದರಿಂದ ಗದ್ದೆ, ತೋಟಕ್ಕೆ ಓಡಾಡಿ ಚಿಕ್ಕಪುಟ್ಟ ಕೆಲಸ ಮಾಡಿ ಅಭ್ಯಾಸ ಇತ್ತು. ಕೃಷಿ ಕೆಲಸದಲ್ಲಿ ನಮ್ಮ ಜೀವನಕ್ಕೆ ಬೇಕಾದ ತುಂಬಾ ಪಾಠ ಕಲಿಯೋದಿದೆ. ನನಗೆ ಆ ಕೆಲಸ ತುಂಬಾ ಖುಷಿ ಕೊಡುತ್ತೆ.
• ನಿಮ್ಮ ತಂದೆ ತಾಯಿ ನಿಮ್ಮ ಬೆಳವಣಿಗೆ ನೋಡಿ ಏನ್ ಹೇಳ್ತಾರೆ?
ಮೊದಲು ನಾನು ನಟನೆಗೆ ಬರಬೇಕಂದಾಗ ಬೇಡ ಎಂದು ವಿರೋಧ ಮಾಡಿದ್ರು. ತಂದೆ-ತಾಯಿಯಾಗಿ ಅವರಿಗಿರುವ ಆತಂಕವನ್ನು ಹೊರಹಾಕಿದ್ರು. ಆದ್ರೆ ಅವರಿಗೆ ಗೊತ್ತಿತ್ತು ನಾನು ಸಾಧಿಸುತ್ತೇನೆ ಎಂದು. ಕಿನ್ನರಿಯಿಂದ ಸಿಕ್ಕ ಜನಪ್ರಿಯತೆಯಿಂದ ತುಂಬಾ ಖುಷಿ ಪಟ್ರು. ಬಿಗ್ಬಾಸ್ಗೆ ಅವಕಾಶ ಸಿಕ್ಕಾಗಲೂ ನನಗಿಂತ ಅವರೇ ತುಂಬಾ ಖುಷಿಪಟ್ಟಿದ್ರು. ನನ್ನ ಮೇಲೆ ಅವರಿಗೆ ಹೆಮ್ಮೆ ಇದೆ.
• ಬಿಡುವಿನ ವೇಳೆಯಲ್ಲಿ ಏನ್ ಮಾಡ್ತೀರಾ?
ಬಿಡುವು ಸಿಕ್ಕಾಗೆಲ್ಲ ನನ್ನ ಪ್ರೀತಿಯ ನಾಯಿಗಳಾದ ಹೀರೋ ಮತ್ತು ಕೂಪರ್ ಜೊತೆ ಕಾಲ ಕಳೆಯುತ್ತೇನೆ. ಪುಸ್ತಕ ಓದುತ್ತೀನಿ, ಈ ನಡುವೆ ಫಿಟ್ನೆಸ್ ಕಡೆ ಸ್ವಲ್ಪ ಗಮನ ಹರಿಸುತ್ತಿದ್ದೇನೆ.
• ನಿಮ್ಮ ಫೇವರೇಟ್ ಫುಡ್ ಯಾವುದು, ಅಡುಗೆ ಮಾಡೋಕೆ ಬರುತ್ತಾ?
ಫಿಶ್ ನನ್ನ ಆಲ್ ಟೈಂ ಫೇವರೇಟ್ ಫುಡ್. ಫಿಶ್ ರೆಸಿಪಿ ಮಾಡೋಕೆ ಬರುತ್ತೆ. ಅದನ್ನು ಬಿಟ್ರೆ ಬೇರೆ ಯಾವುದೇ ಅಡಿಗೆ ಮಾಡಲು ನನಗೆ ಬರೋದಿಲ್ಲ.
• ಮತ್ತೆ ಭೂಮಿ ಶೆಟ್ಟಿಯನ್ನು ಧಾರಾವಾಹಿಗಳಲ್ಲಿ ಕಾಣಬಹುದಾ?
ಸದ್ಯಕ್ಕೆ ಸಿನಿಮಾ ಕಡೆ ಗಮನ ಹರಿಸುತ್ತಿದ್ದೇನೆ. ಧಾರಾವಾಹಿಯಲ್ಲಿ ನಟಿಸೋ ಆಲೋಚನೆ ಸದ್ಯದ ಮಟ್ಟಿಗೆ ಇಲ್ಲ. ಸಿನಿಮಾ ಅವಕಾಶಗಳು ಬರ್ತಿವೇ ಆದ್ರೆ ನನಗೆ ಇಷ್ಟವಾಗೋ ಕಥೆ, ಪರ್ಫಾಮೆನ್ಸ್ ಇರುವಂತ ಪಾತ್ರಗಳಿಗಾಗಿ ನಾನು ಕಾಯುತ್ತಿದ್ದೇನೆ.