-ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸಕೋಟೆಯಿಂದ ಡಾಬಸ್ ಪೇಟೆ ವರೆಗಿನ ರಾಷ್ಟ್ರೀಯ ಹೆದ್ದಾರಿ 207 ರ ನಾಲ್ಕುಪಥದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.
Advertisement
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಡಿಯಲ್ಲಿ ಎರಡು ಪ್ಯಾಕೇಜ್ ಗಳಲ್ಲಿ ಸುಮಾರು ರೂ. 2.8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ದೊಡ್ಡಬಳ್ಳಾಪುರ ಬೈಪಾಸ್ ನಿಂದ ಹೊಸಕೋಟೆ ವರೆಗೆ 42 ಕಿ.ಮೀ ಸುಮಾರು 1317.74 ಕೋಟಿ ರೂ. ಅಂದಾಜು ವೆಚ್ಚ ಹಾಗೂ ಡಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರ ಬೈಪಾಸ್ ವರೆಗೆ ಸುಮಾರು 67 ರಿಂದ 80 ಕಿ.ಮೀ 1438.14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದೆ. ಬಹುದಿನಗಳ ಕನಸು ನನಾಸಾಗಲು ಎರಡು ವರ್ಷ ಬೇಕಾಗಿದೆ.
Advertisement
Advertisement
ಇನ್ನೂ ಎರಡು ದ್ವಿಪಥ ರಸ್ತೆ ಚತುಷ್ಪತ ರಸ್ತೆಯಾಗಲೂ 24 ತಿಂಗಳು ಎರಡು ವರ್ಷ ಕಾಮಗಾರಿ ಸಮಯವಿದ್ದು, ಅವಳಿ ಕಾಮಗಾರಿಯನ್ನು ಶಂಕರನಾರಾಯಣ ಡಾಬಸ್ ಪೇಟೆ ಎಕ್ಸ್ ಪ್ರೆಸ್ ಹೈವೇ, ದೊಡ್ಡಬಳ್ಳಾಪುರ ಹೊಸಕೋಟೆ ಹೈವೇ ಪ್ರೈ.ಲಿಮಿಟೆಡ್ ಕಾಮಗಾರಿ ಗುತ್ತಿಗೆ ಪಡೆದಿದ್ದು, ದೇವನಹಳ್ಳಿಯ ನಲ್ಲೂರು ಹಾಗೂ ತ್ಯಾಮಗೊಂಡ್ಲು ಬಳಿಯ ಹುಲಿಕುಂಟೆಯಲ್ಲಿ ಎರಡು ಟೋಲ್ ಫ್ಲಾಜ ಸಿದ್ದವಾಗಲಿದೆ ಎಂದು ಸೋಮಶೇಖರ್ ಮಾಹಿತಿ ನೀಡಿದ್ದಾರೆ.
Advertisement
ಚತುಷ್ಪತ ರಸ್ತೆ ಈ ಮೊದಲು ಏಕಪಥವಾಗಿತ್ತು. ಇದೀಗ ಈ ಕಾಮಗಾರಿ ಶೇಕಡ 10 ರಷ್ಟು ಮುಗಿದಿದ್ದು, ಉಳಿದ ತೊಂಬತ್ತು ಭಾಗ ನಿರ್ಮಾಣವಾಗುತ್ತಿದೆ. ಒಟ್ಟಾರೆ 122 ಕಿ.ಮೀ ರಸ್ತೆ 3,972 ಸುಮಾರು ನಾಲ್ಕು ಸಾವಿರ ಮರಗಳ ಮಾರಣಹೋಮವಾಗಿರುವುದು ದುಃಖದ ಸಂಗತಿಯೇ, ಆದರೆ ಇದೀಗ ರಸ್ತೆ ಇಕ್ಕೆಲಗಳಲ್ಲಿ ಸುಮಾರು 16,000 ಸಸಿಗಳನ್ನು ರಸ್ತೆ ನಿರ್ಮಾಣದ ನಂತರ ಹಾಕಲು ಅರಣ್ಯ ಇಲಾಖೆಯ ಅನುಮತಿಯನ್ನು ಹೆದ್ದಾರಿ ಪ್ರಾಧಿಕಾರ ಪಡೆದಿದೆ.
ಬಹುತೇಕ 2022 ರ ಡಿಸೆಂಬರ್ ವೇಳೆಗೆ ಹೆದ್ದಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದರಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕೂಡ ಗಣನೀಯವಾಗಿ ಇಳಿಕೆಯಾಗಲಿದೆ.