ಬೆಂಗಳೂರು: ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ಆಗಿದ್ದರೂ, ಬೆಂಗಳೂರು ಟ್ರಾಫಿಕ್ ವಿಚಾರದಲ್ಲಿ ವಿಶ್ವದಲ್ಲೇ 6ನೇ ಅತ್ಯಂತ ಕೆಟ್ಟ ನಗರ ಎಂಬ ಪಟ್ಟ ಪಡೆದಿದೆ.
Advertisement
ದಿ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್-2020 ಬಿಡುಗಡೆಯಾಗಿದ್ದು, ಟ್ರಾಫಿಕ್ ವಿಚಾರದಲ್ಲಿ 6ನೇ ಅತ್ಯಂತ ಕೆಟ್ಟ ಹಾಗೂ ದೇಶದಲ್ಲಿ 2ನೇ ಅತ್ಯಂತ ಕೆಟ್ಟ ಟ್ರಾಫಿಕ್ ಹೊಂದಿರುವ ನಗರ ಎಂದು ಸರ್ವೇಯಲ್ಲಿ ಬಹಿರಂಗವಾಗಿದೆ. ಮುಂಬೈ ವಿಶ್ವದಲ್ಲೇ 2ನೇ ಸ್ಥಾನ ಪಡೆದಿದ್ದು, ರಷ್ಯಾದ ರಾಜಧಾನಿ ಮಾಸ್ಕೋ ಮೊದಲ ಸ್ಥಾನ ಪಡೆದಿದೆ. ಕೊಲಂಬಿಯಾದ ರಾಜಧಾನಿ ಬೊಗೋಟಾ, ಫಿಲಿಫೈನ್ಸ್ ರಾಜಧಾನಿ ಮನಿಲಾ ಹಾಗೂ ಟರ್ಕಿಯ ಇಸ್ತಾಂಬುಲ್ ಕ್ರಮವಾಗಿ 3,4,5ನೇ ಸ್ಥಾನ ಪಡೆದಿವೆ. ದೆಹಲಿ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎನ್ನುವಂತಾಗಿದ್ದು, 8ನೇ ಸ್ಥಾನ ಪಡೆದಿದೆ. 2019ಕ್ಕಿಂತ ಶೇ.20ರಷ್ಟು ಸುಧಾರಿಸಿದೆ.
Advertisement
Advertisement
ಬೆಂಗಳೂರು ಶೇ.20ರಷ್ಟು ಸುಧಾರಣೆ
2019ರಲ್ಲಿ ಬಿಡುಗಡೆಯಾದ ವರದಿಯಲ್ಲಿ ವಿಶ್ವದ 416 ನಗರಗಳ ಪೈಕಿ ಮೊದಲ ಸ್ಥಾನ ಪಡೆಯುವ ಮೂಲಕ ಬೆಂಗಳೂರು ಅತ್ಯಂತ ಕೆಟ್ಟ ಟ್ರಾಫಿಕ್ ಹೊಂದಿದ ನಗರ ಎಂಬ ಕುಖ್ಯಾತಿ ಪಡೆದಿತ್ತು. ಈ ಬಾರಿ ಶೇ.20ರಷ್ಟು ಟ್ರಾಫಿಕ್ ಜಾಮ್ ಕಡಿಮೆಯಾಗಿದೆ. ಹೀಗಾಗಿ 6ನೇ ಸ್ಥಾನ ಪಡೆದಿದೆ. ಒಟ್ಟು 147 ದಿನಗಳು ಕಡಿಮೆ ಟ್ರಾಫಿಕ್ ರೆಕಾರ್ಡ್ ಆಗಿದೆ. ಏಪ್ರಿಲ್ನಲ್ಲೇ ಅತೀ ಕಡಿಮೆ ಟ್ರಾಫಿಕ್ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಶೇ.70ರಷ್ಟು ಸಂಚಾರ ದಟ್ಟಣೆ ಆಗಿತ್ತು.
Advertisement
ಈ ಕುರಿತು ಟಾಮ್ ಟಾಮ್ ಸಂಸ್ಥೆಯ ಉಪಾಧ್ಯಕ್ಷ ರಾಲ್ಫ್-ಪೀಟರ್ ಸ್ಕೋಫರ್ ಮಾತನಾಡಿ, 2019ರಲ್ಲಿ ಜಾಗತಿಕ ಸಂಚಾರ ದಟ್ಟಣೆ ಪ್ರಮಾಣ ಸತತ ಒಂಬತ್ತನೇ ಸಂಚಾರ ಸೂಚ್ಯಂಕಕ್ಕೆ ಹೆಚ್ಚಾಗಿತ್ತು. 2020ರಲ್ಲಿ ವಿಭಿನ್ನ ಚಿತ್ರಣ ನೋಡಿದ್ದೇವೆ. ಲಾಕ್ಡೌನ್ ನಿಂದ ಗಡಿ ಬಂದ್ವರೆಗಿನ ಜನರ ಚಲನೆ ತುಂಬಾ ವೇಗವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ.