– ಚುನಾವಣೆ ಫಲಿತಾಂಶದ ಬಳಿಕ ಬಂಗಾಳದಲ್ಲಿ ಹಿಂಸಾಚಾರ
– ಕೆಸರೆರಚಾಟದಲ್ಲಿ ತೊಡಗಿಕೊಂಡ ಟಿಎಂಸಿ, ಬಿಜೆಪಿ
ಕೋಲ್ಕತ್ತಾ: ಚುನಾವಣಾ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದ್ದು, ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಸಂಸದ ಪ್ರವೇಶ್ ಸಿಂಗ್ ವರ್ಮಾ, ಟಿಎಂಸಿ ಜನಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿ ದೆಹಲಿಗೆ ಬರಬೇಕಲ್ವಾ ಎಂದು ಬೆದರಿಕೆ ಹಾಕಿದ್ದಾರೆ.
Advertisement
ನಿಮ್ಮ ಸಿಎಂ, ನಾಯಕರು ದೆಹಲಿಗೆ ಹೋಗಬೇಕು ಅನ್ನೋದನ್ನ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ನೆನಪಿನಲ್ಲಿಟ್ಟುಕೊಳ್ಳಬೇಕು. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದ್ರೆ ಕೊಲೆ ಅಲ್ಲ. ಟಿಎಂಸಿಯ ಗೂಂಡಾಗಳು ಗೆಲುವಿನ ಬಳಿಕ ಬಿಜೆಪಿ ಕಾರ್ಯಕರ್ತರನ್ನ ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಟಿಎಂಸಿಯ ಗೂಂಡಾಗಳು ಬಿಜೆಪಿ ಕಚೇರಿ ಮತ್ತು ಕಾರ್ಯಕರ್ತರ ಮನೆಗಳನ್ನ ಧ್ವಂಸಗೊಳಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಸಾವಿಗೆ ಬಿಜೆಪಿಯೇ ಹೊಣೆ. ಈ ಹಿಂಸಾಚಾರ ಟಿಎಂಸಿಯ ಪ್ರಾಯೋಜಿತ ಎಂದು ಪ್ರವೇಶ್ ಸಿಂಗ್ ಆರೋಪ ಮಾಡುತ್ತಾರೆ.
Advertisement
ಬಂಗಾಳ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಜೆಪಿ ತನ್ನ ಹಳೆ ಚಾಳಿಯನ್ನ ಮುಂದುವರಿಸಿದೆ. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಜೆಪಿ ಹಳೆಯ ಫೋಟೋ ಮತ್ತು ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದೆ ಎಂದು ತಿರುಗೇಟು ನೀಡಿದರು.