– ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಕಾಡಿಗೆ ಓಡಿದ ಚಿರತೆ
ಮಂಗಳೂರು: ಗುಡ್ಡ ಅಗೆದು ಇಲಿ ಹಿಡಿದಂತಾಯಿತು ಅನ್ನೋ ಮಾತಿಗೆ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಉದಾಹರಣೆ. ಸಾಹಸ ಮೆರೆದು ಚಿರತೆಯನ್ನ ಮಹಿಳೆಯೊಬ್ಬರು ಶೌಚಾಲಯದಲ್ಲಿ ಲಾಕ್ ಮಾಡಿದರೆ, ಅದನ್ನು ಸರಿಯಾಗಿ ರಕ್ಷಣೆ ಮಾಡದೆ ಅರಣ್ಯ ಇಲಾಖೆ ಅಧಿಕಾರಿಗಳು ಮಹಾ ಎಡವಟ್ಟು ಮಾಡಿದ್ದಾರೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೈಕಂಬದಲ್ಲಿ ಇಂದು ಬೆಳಿಗ್ಗೆ ಅಪರೂಪದ ಘಟನೆ ನಡೆಯಿತು. ಆಹಾರ ಬೇಟೆಗೆಂದು ತಡರಾತ್ರಿ 11 ಗಂಟೆಗೆ ಬಂದಿದ್ದ ಚಿರತೆ ಶ್ವಾನವೊಂದನ್ನ ಬೆನ್ನಟ್ಟುತ್ತಾ ಬಂದು ಮನೆಯ ಟಾಯ್ಲೆಟ್ನಲ್ಲಿ ಲಾಕ್ ಆಗಿತ್ತು. ಮನೆ ಮಂದಿಯೆಲ್ಲಾ ಸೇರಿ ಅರಣ್ಯ ಇಲಾಖೆಯವರನ್ನ ಸ್ಥಳಕ್ಕೆ ಕರೆದಿದ್ದಾರೆ. ಹೀಗೆ ಬಂದವರೇ ನಾಲ್ಕು ಗಂಟೆಗಳ ಕಾಲ ಚಿರತೆಯನ್ನು ಸೆರೆ ಹಿಡಿಯಲು ತಯಾರಿ ನಡೆಸಿದ್ದಾರೆ.
Advertisement
Advertisement
ಕೊನೆಗೂ ಅರಿವಳಿಕೆ ಮದ್ದು ನೀಡಿ ಇನ್ನೇನು ಅರಣ್ಯ ಇಲಾಖೆ ಮಂದಿ ಚಿರತೆ ಸೆರೆ ಹಿಡಿತಾರೆ ಅಂದ್ಕೊಂಡಿದ್ದರೆ, ಟಾಯ್ಲೆಟ್ನ ಶೀಟ್ ಮುರಿದು ಚಿರತೆ ಚಂಗನೆ ಹಾರಿಕೊಂಡು ಮತ್ತೆ ಕಾಡಿಗೆ ಸೇರಿದೆ. ಇತ್ತ ಚಿರತೆ ಕಾಡಿಗೆ ಹೋಗುತ್ತಿರೋದನ್ನು ಕಂಡು ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಚಿರತೆ ಲಾಕ್ ಆಗಿದ್ದು ಹೇಗೆ?
ರಾತ್ರಿ 11 ಗಂಟೆಗೆ ನಾಯಿಯನ್ನ ಅಟ್ಟಾಡಿಸಿಕೊಂಡು ಬಂದಿದ್ದ ಚಿರತೆ, ನಾಯಿ ಜೊತೆಗೆ ಜಯಲಕ್ಷ್ಮೀ ಅವರ ಮನೆಯ ಹಿತ್ತಲಲ್ಲಿದ್ದ ಶೌಚಾಲಯಕ್ಕೆ ನುಗ್ಗಿತ್ತು. ಇದರಿಂದ ಎಚ್ಚರಗೊಂಡ ಜಯಲಕ್ಷ್ಮೀ ಅವರು ಶೌಚಾಲಯದ ಹೊರಗಡೆಯಿಂದ ಬಾಗಿಲು ಚಿಲಕ ಹಾಕಿ ಭದ್ರಪಡಿಸಿದ್ದಾರೆ. ಹೀಗೆ ಶ್ವಾನದ ಜೊತೆ ಚಿರತೆಯೂ ಸತತ 15 ಗಂಟೆಗಳ ಕಾಲ ಟಾಯ್ಲೆಟ್ ನಲ್ಲಿ ಅಂತರ ಕಾಯ್ದು ಕೂತಿತ್ತು.
ತನ್ನ ಬೇಟೆ ಮುಂದೆಯೇ ಇದ್ದರೂ ಚಿರತೆ ಸುಮ್ಮನೇ ಕುಳಿತಿತ್ತು. ಇತ್ತೀಚೆಗೆ ಹಲವು ಸಾಕು ಪ್ರಾಣಿಗಳ ಸ್ವಾಹಕ್ಕೆ ಕಾರಣವಾಗಿದ್ದ ಚಿರತೆ ಸಿಕ್ಕೇ ಬಿಡ್ತು ಎಂದು ಜನ ಖುಷಿಪಟ್ಟಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಎಡವಟ್ಟು, ಅಚಾತುರ್ಯದಿಂದ ಮತ್ತೆ ಕಾಡು ಸೃಇಕೊಮಡಿತು. ಮಹಿಳೆಯೊಬ್ಬರು ತನ್ನ ದಿಟ್ಟತನದಿಂದ ಚಿರತೆಯನ್ನ ಬಂಧಿಯಾಗಿಸಿದ್ದರೆ, ಇತ್ತ ಅರಣ್ಯ ಇಲಾಖೆ ಅಧಿಕಾರಿಗಳು ಕೈ ಚೆಲ್ಲಿದ್ದಾರೆ. ಈ ಭಾಗದ ಜನರಲ್ಲಿ ಮತ್ತದೇ ಚಿರತೆ ಭಯ ಕಾಡಲು ಆರಂಭಿಸಿದೆ.