ಬೆಂಗಳೂರು: ಕರ್ನಾಟಕದ ಜೈನ ಬಸದಿಗಳಲ್ಲಿ ಪೂಜೆ ಮಾಡುತ್ತಿರೋ ಜೈನ ಪುರೋಹಿತರಿಗೆ ಸರ್ಕಾರದಿಂದ ಧನಸಹಾಯ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೊರೊನಾ ಲಾಕ್ ಡೌನ್ ಪರಿಹಾರವನ್ನು ಸರ್ಕಾರ ವಿವಿಧ ವರ್ಗಗಳಿಗೆ ಘೋಷಿಸಿದೆ. ಹಾಗೆಯೇ ಜೈನ ದೇವಾಲಯಗಳಲ್ಲಿ ಪೂಜೆ ಮಾಡುತ್ತಿರೋ ಪುರೋಹಿತರ ಸ್ಥಿತಿ ಕಷ್ಟಕರವಾಗಿದೆ. ಬಸದಿಗಳಿಗೆ ಯಾವುದೇ ಭಕ್ತಾದಿಗಳು ದೇವರ ದರ್ಶನಕ್ಕೆ ಬರತ್ತಿಲ್ಲ. ಹೀಗಾಗಿ ಆದಾಯವೂ ತಪ್ಪಿ ಹೋಗಿದ್ದು ಸರ್ಕಾರ ಸಹಾಯ ನೀಡಬೇಕು. ಇದನ್ನೂ ಓದಿ: ಶಾಲಾ-ಕಾಲೇಜುಗಳ ಬೋಧಕೇತರ ಸಿಬ್ಬಂದಿಗೂ ಪರಿಹಾರ ಕೊಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
Advertisement
Advertisement
ರಾಜ್ಯದಲ್ಲಿ ಸುಮಾರು 1130 ಜೈನ ಬಸದಿಗಳಿವೆ. ಈ ಬಸ್ತಿಗಳಲ್ಲಿ ಸುಮಾರು 2000 ಸಾವಿರ ಪುರೋಹಿತರು ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಬಸದಿಗಳಲ್ಲಿ ಪೂಜೆ ಸಲ್ಲಿಸುವ ಪುರೋಹಿತರಿಗೆ ಹಾಗೂ ಅವರ ಕುಟುಂಬದವರಿಗೆ ತಲಾ ಐದು ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
Advertisement