ಬೆಂಗಳೂರು: ಜೂನ್ ತಿಂಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ‘ಮಹಾ’ ಕೊರೊನಾ ಅಪ್ಪಳಿಸಲಿದೆ. ಈಗಾಗಲೇ ಹಿಂಡಿಹಿಪ್ಪೆ ಮಾಡಿರುವ ಮುಂಬೈ ಸೋಂಕು ಬೆಂಗಳೂರಿಗೆ ಬರಲಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕರ್ನಾಟಕದ ಗ್ರೀನ್ ಝೋನ್ಗೆ ದಾಳಿಯಿಟ್ಟ ಮುಂಬೈ ಬಾಂಬ್ ಜೂನ್ನಲ್ಲಿ ಮತ್ತೆ ಬೆಂಗಳೂರಿಗೆ ದಾಂಗುಡಿ ಇಡಲಿದೆ. ಜೂನ್ನಲ್ಲಿ ಕೊರೊನಾ ಎಕ್ಸ್ ಪ್ರೆಸ್ ರೈಲು ಬೆಂಗಳೂರಲ್ಲಿ ಲ್ಯಾಂಡ್ ಆಗಲಿದ್ದು, ಮುಂಬೈನಿಂದ ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ಸಿಲಿಕಾನ್ ಸಿಟಿಗೆ ಬರಲಿದ್ದಾರೆ.
Advertisement
Advertisement
ಜೂನ್ 1ರಿಂದ ಮುಂಬೈ ಟು ಬೆಂಗಳೂರು ಹಾಗೂ ಮುಂಬೈ ಟು ಗದಗ ರೈಲು ಸೇವೆ ಆರಂಭವಾಗಲಿದೆ. ಹೀಗಾಗಿ ಈಗ ಬರಲು ಅವಕಾಶ ಸಿಗದವರು ಜೂನ್ನಲ್ಲಿ ಬರುವ ಸಾಧ್ಯತೆ ಇದೆ. ಉದ್ಯೋಗ ಅರಸಿ ಬಹುಸಂಖ್ಯೆಯ ಮುಂಬೈ ಕಾರ್ಮಿಕರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಕರ್ನಾಟಕಕ್ಕೆ ಮೂರು ತಿಂಗಳು ಆಪತ್ತು- ತಜ್ಞರಿಂದ ಸ್ಫೋಟಕ ಸೀಕ್ರೆಟ್ ರಿವೀಲ್
Advertisement
ಈ ಮೂಲಕ ಈಗಾಗಲೇ ಮುಂಬೈ ಬಾಂಬ್ ಹೊಡೆತಕ್ಕೆ ನಲುಗಿದ ಕರ್ನಾಟಕದಲ್ಲಿ ಮತ್ತೆ ಜೂನ್ನಲ್ಲಿ ಮತ್ತೆ ಕೊರೊನಾ ಮಹಾ ಸ್ಫೋಟವಾಗುವ ಸಂಭವವಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಕೇಂದ್ರಗಳು ಈಗಾಗಲೇ ತುಂಬಿ ತುಳುಕುತ್ತಿದೆ. ಈ ಮಧ್ಯೆ ಈಗ ಮುಂಬೈ ಎಂಟ್ರಿ ಬೆಂಗಳೂರಿಗೆ ಆಘಾತ ನೀಡೋದು ಖಚಿತವಾಗಿದೆ.