– ಗೋವಾ-ಕರ್ನಾಟಕ ಗಡಿಯಲ್ಲಿ ಮುಕ್ತ ಸಂಚಾರ
ಕಾರವಾರ: ಕೊರೊನಾ ಎರಡನೇ ಅಲೆ ಹೆಚ್ಚಾಗುತಿದ್ದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆಯಾ ಭಾಗದಲ್ಲಿ ತಪಾಸಣೆ ಜೊತೆ ಮಹಾರಾಷ್ಟ್ರ ಹಾಗೂ ಕೇರಳ ಭಾಗದಿಂದ ಬರುವ ಜನರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಪತ್ರ ತಂದವರಿಗೆ ಕರ್ನಾಟಕಕ್ಕೆ ಪ್ರವೇಶ ನೀಡಲಾಗುತ್ತದೆ.
Advertisement
ಈ ಹಿನ್ನಲೆಯಲ್ಲಿ ನಿನ್ನೆ ದಿನ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗರವರು ಜಿಲ್ಲೆಯ ಗಡಿಭಾಗದ ಮಾಜಾಳಿಯ ತಪಾಸಣಾ ಕೇಂದ್ರ, ಭಟ್ಕಳ ಭಾಗದಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಜೊತೆ ಕಠಿಣ ತಪಾಸಣೆ ಮಾಡುಲು ಆದೇಶ ನೀಡಿದ್ದಾರೆ. ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಪತ್ರ ಇದ್ದ ಕೇರಳ, ಮಹಾರಾಷ್ಟ್ರ ಪ್ರವಾಸಿಗರನ್ನು ಗಡಿಯೊಳಗೆ ಬಿಡುವಂತೆ ಸೂಚಿಸಿದ್ದರು.
Advertisement
Advertisement
ಉನ್ನತ ಅಧಿಕಾರಿ ನೀಡಿದ ಆದೇಶಕ್ಕೆ ಯಾವುದೇ ಕಿಮ್ಮತ್ತನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೀಡದೇ ಮಹಾರಾಷ್ಟ್ರ, ಕೇರಳದಿಂದ ಬರುವ ವಾಹನಗಳಿಗೆ ದಾಖಲೆ ಪರಿಶೀಲನೆ ಹೊರತುಪಡಿಸಿ ಆರ್.ಟಿ.ಪಿ.ಸಿ.ಆರ್ ಪತ್ರ ಇಲ್ಲದಿದ್ದವರಿಗೂ ಜಿಲ್ಲೆಯೊಳಗೆ ಬಿಡಲಾಗುತ್ತಿದೆ.
Advertisement
ಇನ್ನು ಓರ್ವ ರೆವಿನ್ಯೂ ಅಧಿಕಾರಿ ಹೊರತುಪಡಿಸಿ ಆರೋಗ್ಯ ಇಲಾಖೆ ಸಿಬ್ಬಂದಿಯಾಗಲಿ ತಪಾಸಣೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳಾಗಲಿ ನಿಯೋಜನೆ ಮಾಡಿಲ್ಲ. ತಪಾಸಣಾ ಕೇಂದ್ರವನ್ನು ತೆರೆಯುವ ಮೂಲಕ ಕರೆ ಗಡಿ ಜಿಲ್ಲೆ ಆಹ್ವಾನ ನೀಡುತ್ತಿದೆ.