ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಕಾಲು ತೊಳೆದು, ಹೂವು ಹಾಕಿ ಬೆಂಬಲಿಗರು ಪಾದಪೂಜೆ ಮಾಡಿವ ಮೂಲಕ ಅಂಧಾಭಿಮಾನ ಮೆರೆದಿದ್ದಾರೆ.
ಚಾಮರಾಜಪೇಟೆಯಲ್ಲಿ ಬಂಗಾರದ ಮನುಷ್ಯ ಜಮೀರಣ್ಣ ಅಭಿಮಾನಿಗಳ ಬಳಗದಿಂದ ಕಾರ್ಯಕ್ರಮ ಆಯೋಜಿಸಿ, ಪಾದಪೂಜೆ ಮಾಡಿ ಗೌರವಿಸಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತು ಒಟ್ಟೊಟ್ಟಾಗಿ ನಿಂತು ಪಾದಪೂಜೆ ಮಾಡಿದ್ದಾರೆ. ಅಲ್ಲದೆ ಬಂಗಾರದ ಮನುಷ್ಯ ಜಮೀರಣ್ಣ ಎಂಬ ಕಟೌಟ್ನ್ನು ಶಾಸಕ ಜಮೀರ್ ಅಹ್ಮದ್ ಕಡೆಯಿಂದಲೇ ಬಿಡುಗಡೆ ಮಾಡಿಸಿದ್ದಾರೆ. ಈ ವೇಳೆ ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ.
Advertisement
Advertisement
ಬೆಂಬಲಿಗರು ಸಾಮಾಜಿಕ ಅಂತರವಿಲ್ಲದೆ ಒಟ್ಟಿಗೆ ಸೇರಿ ಕಾಲು ತೊಳೆದು, ಹೂ ಹಾಕಿ ಪಾದಪೂಜೆ ಮಾಡಿ, ಬಳಿಕ ಬಟ್ಟೆಯಿಂದ ಜಮೀರ್ ಕಾಲು ವರೆಸಿದ್ದಾರೆ. ಈ ವೇಳೆ ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.