ಇಸ್ಲಾಮಾಬಾದ್: ಸೌದಿ ಅರೇಬಿಯಾ ಚೀನಾದ ಕೊರೊನಾ ಲಸಿಕೆ ಪಡೆದ ನಾಗರಿಕರಿಗೆ ಪ್ರವೇಶ ನಿರಾಕರಿಸಿದ್ದರಿಂದ ಪಾಕಿಸ್ತಾನದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಚೀನಾ ಅಭಿವೃದ್ಧಿ ಪಡಿಸಿದ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ನೋಂದಾಯಿತವಾಗಿದ್ದರೂ ಸೌದಿ ಅರೇಬಿಯಾ ಈ ಲಸಿಕೆಗಳನ್ನು ಪಡೆದವರಿಗೆ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾ ವ್ಯಾಕ್ಸಿನ್ ಪಡೆದ ಇಮ್ರಾನ್ ಖಾನ್ಗೆ ಕೊರೊನಾ ಪಾಸಿಟಿವ್
Advertisement
Advertisement
ಮಧ್ಯಪ್ರಾಚ್ಯದ ಕೆಲ ರಾಷ್ಟ್ರಗಳು ಚೀನಾದ ಲಸಿಕೆಯನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ನಾವು ಬೇರೆ ಲಸಿಕೆಯನ್ನು ಜನತೆಗೆ ನೀಡಬೇಕೆಂದು ಎಂದು ಶೇಖ್ ರಶೀದ್ ಪ್ರಧಾನಿ ಇಮ್ರಾನ್ ಖಾನ್ ಅವರಲ್ಲಿ ಹೇಳಿದ್ದಾರೆ.
Advertisement
ಫೈಝರ್, ಅಸ್ಟ್ರಾಜೆನೆಕಾ, ಮಾಡೆರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಕಂಪನಿ ತಯಾರಿಸಿದ ಲಸಿಕೆಯನ್ನು ಪಡೆದವರಿಗೆ ಪ್ರವೇಶ ನೀಡುವುದಾಗಿ ಸೌದಿ ಅರೇಬಿಯಾ ಹೇಳಿದೆ. ಇದನ್ನೂ ಓದಿ: ಭಾರತ ಆಯ್ತು ಈಗ ಚೀನಾದ ಕುತಂತ್ರಿ ನಡೆಯ ವಿರುದ್ಧ ಮ್ಯಾನ್ಮಾರ್ ಕಿಡಿ
Advertisement
ಸೌದಿ ಅರೇಬಿಯಾದ ಈ ನಿರ್ಧಾರದಿಂದ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು, ಪವಿತ್ರ ಹಜ್ ಯಾತ್ರೆಗೆ ತೆರಳುವ ಮಂದಿಗೆ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಆದ್ಯತೆಯ ಆಧಾರದಲ್ಲಿ ಈ ಮಂದಿಗೆ ಫೈಝರ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಚೀನಾದ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದರೂ ಅದರ ಪರಿಣಾಮಕಾರಿತ್ವದ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಏಪ್ರಿಲ್ನಲ್ಲಿ ಚೀನಾದ ರೋಗ ನಿಯಂತ್ರಣ ಸಂಸ್ಥೆ ಚೀನಾ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆ ಪರಿಣಾಕಾರಿಯಲ್ಲ. ಲಸಿಕೆಗೆ ಕೆಲ ಸುಧಾರಣೆಯ ಅಗತ್ಯವಿದೆ ಎಂದು ಹೇಳಿತ್ತು.