– ಯುವಕನ ಐಡಿಯಾಕ್ಕೆ ನೆಟ್ಟಿಗರು ಫಿದಾ
ಸಾಮಾನ್ಯವಾಗಿ ಹಿಂದೆಲ್ಲ ಕೆಂಗುಲಾಬಿ ಕೊಟ್ಟು ಹುಡುಗ ಅಥವಾ ಹುಡುಗಿ ಪ್ರೇಮ ನಿವೇದನೆಯನ್ನು ಮಾಡುತ್ತಿದ್ದರು. ಆದರೆ ಆಧುನಿಕ ಜಗತ್ತಿನಲ್ಲಿ ವಿಭಿನ್ನತೆಗೆ ಹೆಚ್ಚಿನ ಒಲವು ನೀಡಲಾಗುತ್ತಿದ್ದು, ಪ್ರಿಯತಮೆಗೆ ಡಿಫರೆಂಟ್ ಆಗಿ ಪ್ರಪೋಸ್ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಅಂತೆಯೇ ಇಲ್ಲೊಬ್ಬ ಯುವಕ ವಿಭಿನ್ನವಾಗಿ ಪ್ರಪೋಸ್ ಮಾಡಲು ಹೋಗಿ ಸುದ್ದಿಯಾಗಿದ್ದಾನೆ.
So cute. Well, that would be the bad idea of proposing as few girls would just swallow the golgappa ????????????
— Shadma Rafeeq (@RafeeqShadma) June 11, 2021
Advertisement
ಹೌದು, ಗೋಲ್ಗಪ್ಪಾ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಹುಡುಗಿಯರಿಗೆ ಅಂತೂ ಪಂಚಪ್ರಾಣ. ಹೀಗಾಗಿ ಹುಡುಗನೊಬ್ಬ ತನ್ನ ಪ್ರೇಯಸಿಗೆ ಗೋಲ್ಗಪ್ಪಾದಲ್ಲಿ ಉಂಗುರವಿಟ್ಟು ಪ್ರಪೋಸ್ ಮಾಡಿದ್ದಾನೆ. ಸದ್ಯ ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಭಿನ್ನವಾಗಿ ಪ್ರಪೋಸ್ ಮಾಡಿದ್ದಕ್ಕೆ ಅಚ್ಚರಿಗೊಳಗಾಗಿದ್ದಾರೆ. ಇದನ್ನೂ ಓದಿ: ಪ್ರೀತಿ ಉಳಿಸಿಕೊಳ್ಳಲು 10 ವರ್ಷ ಪ್ರಿಯತಮೆಯನ್ನು ಕೋಣೆಯಲ್ಲೇ ಬಚ್ಚಿಟ್ಟ ಪಾಗಲ್ ಪ್ರೇಮಿ..!
Advertisement
i mean,, can’t say no to pani puri
Gol gappay or pani puri are enjoyed by everyone and they are a real treat. But none of us would have imagined getting proposed through gol gappay. This man is doing things differently and after bizarre food proposals, pic.twitter.com/OwvGFc1Jd4
— Monthly Andaz e Jahan (@e_monthly) June 3, 2021
Advertisement
ಯುವಕ ತನ್ನ ಪ್ರಿಯತಮೆಗೆ ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಿರುವುದಕ್ಕೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಿಯತಮೆಗೆ ಇದಕ್ಕಿಂತ ವಿಶೇಷವಾಗಿ ಪ್ರೇಮ ನಿವೇದನೆ ಮಾಡಲು ಸಾಧ್ಯವಿಲ್ಲ. ಯುವಕ ಸೂಪರ್ ಆಗಿ ಪ್ರಪೋಸ್ ಮಾಡಿದ್ದಾನೆ. ಇದನ್ನೂ ಊಹಿಸಲೂ ಸಾಧ್ಯವಿಲ್ಲ ಎಂದೆಲ್ಲ ಕಾಮೆಂಟ್ ಮಾಡುವ ಮೂಲಕ ಯುವಕನ ಹೊಸ ಐಡಿಯಾಕ್ಕೆ ಫಿದಾ ಆಗಿದ್ದಾರೆ.
Advertisement
Nice ???? rab ne banayi jode
— shafique (@shafiqu36902030) June 11, 2021
ಸದ್ಯ ಲವ್ವರ್ಸ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಧನಾತ್ಮಕ ಕಾಮೆಂಟ್ ಗಳು ಬಂದಿದೆ. ಅಲ್ಲದೆ ಹೆಚ್ಚು ಜನರು ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.