ಮಂಗಳೂರು: ಆಟವಾಡುತ್ತಿದ್ದ ವೇಳೆ ಗೇಟಿನೊಂದಿಗೆ ಕಾಂಪೌಂಡ್ ಕುಸಿದು 3 ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮಂಗಳೂರಿನ ಮುನ್ನೂರು ಗ್ರಾಮದ ಸಂತೋಷನಗರ ಮಸೀದಿ ಸಮೀಪ ಘಟನೆ ನಡೆದಿದ್ದು, ಅಶ್ರಫ್, ಆಯೇಷಾ ದಂಪತಿ ಪುತ್ರ ಐಮಾನ್(3) ಮೃತಪಟ್ಟ ಮಗು. ಐಮಾನ್ ಗೇಟ್ ಬಳಿ ಆಟವಾಡುತ್ತಿದ್ದಾಗ ಇದಕ್ಕಿದ್ದಂತೆ ಕೌಂಪೌಂಡ್ ಗೋಡೆ ಕುಸಿದಿದ್ದು ತಡೆಗೋಡೆಯ ಅಡಿಗೆ ಮಗು ಸಿಲುಕಿ ಮೃತಪಟ್ಟಿದೆ.
Advertisement
Advertisement
ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.