– ಪೊಲೀಸರ ಬಲೆಗೆ ಚಾಲಾಕಿ ಲೇಡಿ
ಬೆಂಗಳೂರು: ಖಾತೆಯಲ್ಲಿ ಹಣ ಇಲ್ಲದಿದ್ದರೂ ಎಟಿಎಂನಿಂದ 17 ಲಕ್ಷ ರೂಪಾಯಿ ಕದ್ದಿದ್ದ ವಿದೇಶಿ ಮಹಿಳೆಯನ್ನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಪೇನ್ ದೇಶದ ಸೇಫಿನಿ ಬಂಧಿತ ಮಹಿಳೆ.
ಪ್ರಕರಣ ಬೆಳಕಿಗೆ ಬಂದಿದ್ದೇಗೆ?: ಜನವರಿ 10ರಂದು ಗ್ರಾಹಕರೊಬ್ಬರು ಎಸ್ಬಿಐ ಎಟಿಎಂಗೆ ತೆರಳಿ 1,500 ರೂ. ಡ್ರಾ ಮಾಡಿದ್ದಾರೆ. ಆದ್ರೆ ಎಟಿಎಂನಿಂದ ದಿಡೀರ್ ಅಂತ ಒಂದು ಲಕ್ಷ ರೂಪಾಯಿ ಬಂದಿದೆ. ಒಂದು ಲಕ್ಷ ರೂ. ಹಣ ನೋಡಿದ ಗ್ರಾಹಕ ಭಯಗೊಂಡು ಎಸ್ಬಿಐ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಿ ಬ್ಯಾಂಕ್ ಸಿಬ್ಬಂದಿ ಮತ್ತೆ ಅದೇ ಡೆಬಿಟ್ ಕಾರ್ಡ್ ಬಳಸಿ 1,500 ರೂ. ಡ್ರಾ ಮಾಡಿದ್ದರು. ಆದ್ರೆ ಆಗ ಕೇವಲ 1,500 ರೂ. ಮಾತ್ರ ಬಂದಿದೆ. ಎರಡೂ ಬಾರಿಯೂ ನಿರ್ದೇಶನ ನೀಡಿದ ಮೊತ್ತ ಸರಿಯಾಗಿ ಬಂದಿದ್ದರಿಂದ ಬ್ಯಾಂಕ್ ಸಿಬ್ಬಂದಿ ಎಟಿಎಂ ಬಾಗಿಲು ಹಾಕಿ ತೆರಳಿದ್ದರು.
Advertisement
Advertisement
ಮರುದಿನ ಬೆಳಗ್ಗೆ ಬಂದ ಟೆಕ್ನಿಕಲ್ ತಂಡ ಎಟಿಎಂ ಯಂತ್ರ ಪರಿಶೀಲಿಸಿದಾಗ ಡಿವೈಸ್ ಹಾಕಿರೋದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಮಹಿಳೆ ಡಿವೈಸ್ ಅಳವಡಿಸುತ್ತಿರೋದು ಕಂಡು ಬಂದಿದೆ. ಡಿವೈಸ್ ಅಳವಡಿಸಿದ ಮಹಿಳೆ ಖಾತೆಯಲ್ಲಿ ಹಣ ಇಲ್ಲದಿದ್ದರೂ 17 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಳು.
Advertisement
ಡ್ರಾ ಮಾಡಿದ್ದು ಹೇಗೆ?: ಜನವರಿ 10ರಂದು ಬೆಂಗಳೂರಿನ ಶಿವರಾಮಕಾರಂತ ನಗರದ ಎಸ್ಬಿಐ ಎಟಿಎಂಗೆ ಬಂದಿದ್ದ ಸೇಫಿನಿ, ಯಂತ್ರಕ್ಕೆ ಡಿವೈಸ್ ಅಳವಡಿಸಿ ಅದರೊಳಗಿನ ಉಪಕರಣಗಳ ಕಾರ್ಯ ಸ್ಥಗಿತಗೊಳಿಸಿದ್ದಳು. ನಂತರ ಎಟಿಎಂನಿಂತ ಹಂತ ಹಂತವಾಗಿ 17.71 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಳು.
Advertisement
ಸಿಸಿಟಿವಿ ದೃಶ್ಯಗಳನ್ನಾಧರಿಸಿ ಪೊಲೀಸರು ಸೇಫನಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಸೇಫಿನಿಯ ಬಂಧನವಾಗಿದ್ದು, ಆಕೆಯ ಸಹಚರರಿಗಾಗಿ ಪೊಲೀಸರು ವಿಶೇಷ ಬಲೆ ಬೀಸಿದ್ದು ತನಿಖೆ ಮುಂದುವರಿದಿದೆ.