ಪಾಟ್ನಾ: 14 ದಿನಗಳ ಕ್ವಾರಂಟೈನ್ ಸಮಯವನ್ನು ಪೂರ್ಣಗೊಳಿಸಿ ಮನೆಗಳಿಗೆ ಹಿಂದಿರುಗುತ್ತಿದ್ದ ಪ್ರವಾಸಿ ಕಾರ್ಮಿಕರಿಗೆ ಬಿಹಾರ ಸರ್ಕಾರ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್ಗಳನ್ನು ಉಚಿತವಾಗಿ ವಿತರಣೆ ಮಾಡಿದೆ.
ಕುಟುಂಬ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಬಿಹಾರ ಸರ್ಕಾರ ಈ ಕಾರ್ಯವನ್ನು ಮಾಡುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಹಾರದಲ್ಲಿ ಕುಟುಂಬ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆ ಜಾರಿ ಮಾಡಿದೆ. ಅಲ್ಲದೇ ಕೋವಿಡ್-19ಗೂ ಸರ್ಕಾರದ ಹೊಸ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನು ಓದಿ: ಜಾಗತಿಕ ಕೊರತೆ – ಕಾಂಡೋಮ್ ಕಾರ್ಖಾನೆಯ ನೌಕರರನ್ನು ‘ಅಗತ್ಯ ಸೇವೆ’ ಪಟ್ಟಿಗೆ ಸೇರ್ಪಡೆ
Advertisement
Advertisement
ಲಾಕ್ಡೌನ್ ಕಾರಣದಿಂದ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆ ಲಭಿಸಿದ ಕಾರಣ ತಮ್ಮ ಸ್ವ-ಸ್ಥಳಗಳಿಗೆ ವಾಪಸ್ ಆಗುತ್ತಿದ್ದಾರೆ. ಈ ರೀತಿ ವಾಪಸ್ ಆಗುತ್ತಿರುವ ಕಾರ್ಮಿಕರಿಗೆ 14 ದಿನಗಳ ಅವಧಿಯ ಹೋಂ ಕ್ವಾರಂಟೈನ್ಗೆ ಸೂಚನೆ ನೀಡಿ ಸರ್ಕಾರ ಮನೆಗಳಿಗೆ ಕಳುಹಿಸುತ್ತಿದೆ. ಈ ವೇಳೆ ಅಧಿಕಾರಿಗಳು ಕಾರ್ಮಿಕರಿಗೆ ಕಾಂಡೋಮ್ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅರೋಗ್ಯ ಅಧಿಕಾರಿಗಳಾಗಿ ಜನಸಂಖ್ಯೆ ನಿಯಂತ್ರಣ ನಮ್ಮ ಕರ್ತವ್ಯ ಎಂದು ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ: ಕೊರೊನಾ ಎಫೆಕ್ಟ್- ಕಳೆದೊಂದು ವಾರದಿಂದ ಕಾಂಡೋಮ್ ಖರೀದಿ ಹೆಚ್ಚಳ
Advertisement
Advertisement
ಕೇವಲ ಕ್ವಾರಂಟೈನ್ ಕೇಂದ್ರಗಳು ಮಾತ್ರವಲ್ಲದೇ ಗೋಪಾಲ್ಗಂಜ್, ಸಮಸ್ತಿಪುರ, ಚಂಪಾರನ್, ಸರನ್ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ಕಾಂಡೋಮ್ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಲಾಕ್ಡೌನ್ ಕಾರಣದಿಂದ ಬಿಹಾರ ರಾಜ್ಯವೊಂದರಲ್ಲೇ ಸುಮಾರು 8 ಲಕ್ಷ ಪ್ರವಾಸಿ ಕಾರ್ಮಿಕರು ಸ್ವ-ಸ್ಥಳಗಳಿಗೆ ವಾಪಸ್ ಆಗಿದ್ದಾರೆ. ಸುಮಾರು 5.26 ಲಕ್ಷ ಮಂದಿಗೆ ಸಾಂಸ್ಥಿಕ ಕಾರಂಟೈನ್ ಮಾಡಲಾಗಿದೆ. ಜೂನ್ 15 ಬಳಿಕ ಕಾರಂಟೈನ್ ಕೇಂದ್ರಗಳನ್ನು ಮುಚ್ಚಿ ಆ ಬಳಿಕ ಎಲ್ಲರಿಗೂ ಹೋಂ ಕ್ವಾರಂಟೈನ್ ಮಾಡಲು ಬಿಹಾರ ಸರ್ಕಾರ ನಿರ್ಧರಿಸಿದೆ.
ಕೊರೊನಾ ಸೋಂಕಿನ ಕಾರಣದಿಂದ ಬಿಹಾರದಲ್ಲಿ ಇದುವರೆಗೂ 23 ಮಂದಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 3,945ಕ್ಕೇರಿದೆ. ಇದನ್ನು ಓದಿ: ಕಾಂಡೋಮ್ ವಿನ್ಯಾಸಿತ ಬಟ್ಟೆ ಧರಿಸಿದ ಚಿರಂಜೀವಿ ಸೊಸೆ- ಸುಸ್ಥಿರತೆ ಪಾಠ