ಬೆಂಗಳೂರು: ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ನಿಂದ ಬಂದ ಮೇಲೆಯೂ ಕನಿಷ್ಠ 14 ದಿನ ಮನೆಯಲ್ಲಿ ಕ್ವಾರಂಟೈನ್ ಆಗಿರೋದು ಕಡ್ಡಾಯ. ಡಿಸ್ಚಾರ್ಜ್ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ.
Advertisement
ಮುನ್ನೆಚ್ಚರಿಕೆ ಕ್ರಮಗಳು:
* ಬಿಡುಗಡೆಯಾದ ನಂತರ 14 ದಿನಗಳು ಮನೆಯಲ್ಲೇ ಕ್ವಾರಂಟೈನ್ ಆಗಿರಬೇಕು.
* ವೈದ್ಯರು ತಿಳಿಸಿರುವ ಚಿಕಿತ್ಸೆ ಹಾಗೂ ಇತರ ಸಾಮಾನ್ಯ ಅಂಶಗಳನ್ನು ಮುಂದುವರಿಸುವುದು.
* ಇತರರ ಸಂಪರ್ಕಕ್ಕೆ ಬಾರದ ಮನೆಯಲ್ಲಿ ಪ್ರತ್ಯೇಕವಾಗಿರುವುದು. ಹೊರಗ ಬರದೇ ಸ್ವಗೃಹ ಬಂಧನದಲ್ಲಿರಬೇಕು.
* ನೀವು ಇರುವ ಸ್ಥಳವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು.
* ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು (ಇತರರೊಂದಿಗೆ ಫೋನಿನಲ್ಲಿ ಸಂಪರ್ಕ ಸಾಧಿಸುವುದು)
* ಆಲ್ಕೋಹಾಲ್, ತಂಬಾಕು ಹಾಗೂ ಇನ್ನಾವುದೇ ಡ್ರಗ್ಸ್ ಗಳನ್ನು ಸೇವಿಸದೇ ಇರುವುದು.
Advertisement
Advertisement
* ಒಂದು ವೇಳೆ ಏನಾದರೂ ಆರೋಗ್ಯ ಸಮಸ್ಯೆ ಪ್ರಾರಂಭವಾದರೆ ಕೂಡಲೇ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವುದು.
* ಇದಾದ ನಂತರ ಮತ್ತೆ 14 ದಿನಗಳು ವೈಯಕ್ತಿಕ ವರದಿ ಮಾಡಿಕೊಳ್ಳುವ ಮೂಲಕ ಕ್ವಾರಂಟೈನ್ ನಲ್ಲಿರಬೇಕು.
* ಈ ಸಮಯದಲ್ಲಿ ಸಾಧ್ಯವಾದಷ್ಟು ಪ್ರತ್ಯೇಕ ಕೋಣೆಗೆ ಸೀಮಿತವಾಗಿರಿ ಹಾಗೂ ಮಾಸ್ಕ್ ಬಳಕೆ, ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು. ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವ ಸ್ಥಿತಿಯನ್ನು ಮುಂದುವರಿಸಿ.
Advertisement