ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದೂ, ಸೂರ್ಯನ ದರ್ಶನವಿಲ್ಲದೇ ಕೆಲವೆಡೆ ತುಂತುರು ಮಳೆಯಾಗುತ್ತಿದೆ. ತೀವ್ರವಾಗಿ ಬೀಸುತ್ತಿರುವ ತಂಗಾಳಿಗೆ ಕೋಟೆನಾಡಿನ ಜನರು ತತ್ತರಗೊಂಡಿದ್ದಾರೆ.
Advertisement
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಹಲವೆಡೆ ಬಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲಿ ಮೋಡ ಮುಸುಕಿದ ವಾತಾವರಣವಿದ್ದೂ, ಕ್ಷಣಕ್ಕೊಮ್ಮೆ ತುಂತುರು ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಯಾದ್ಯಂತ ತಂಪಾದ ವಾತಾವರಣವಿದೆ. ಇದನ್ನೂ ಓದಿ: ವಿಶ್ವನಾಥ್ ಹೊಸಬರು, ಪಕ್ಷದ ಬಗ್ಗೆ ಹೆಚ್ಚು ಗೊತ್ತಿಲ್ಲ: ಶಾಸಕ ಪ್ರೀತಂಗೌಡ
Advertisement
Advertisement
ಕಳೆದ ಮೂರುದಿನಗಳಿಂದ ಬಾರಿ ತಂಗಾಳಿ ಬೀಸುತಿದೆ. ಹೀಗಾಗಿ ಬಿಸಿಲಿನ ಹವಾಗುಣಕ್ಕೆ ಹೊಂದಿಕೊಂಡಿದ್ದ ಕೋಟೆನಾಡಿನ ಜನರು, ತೀವ್ರ ಚಳಿಯಿಂದಾಗಿ ತತ್ತರಗೊಂಡಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಹ ಹೊರಬಾರೇ ಬೆಚ್ಚಗೆ ಮನೆಯಲ್ಲೇ ಕುಳಿತುಕೊಂಡಿದ್ದಾರೆ. ಅಲ್ಲದೇ ಕೆಲವರು ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಬಂದರೂಸಹ ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ಚಳಿಯನ್ನತಾಳದ ಜನರು,ಕೊರೊನ ಬೀತಿಯಿಂದಾಗಿ ಬೆಚ್ಚನೆಯ ಸ್ವೆಟರ್, ಜರ್ಕಿನ್ ಹಾಗೂ ಮಂಕಿಕ್ಯಾಪ್ಗಳ ಖರೀದಿಗೆ ಮುಂದಾಗಿದ್ದಾರೆ.