– ರಾಜ್ಯದಲ್ಲಿ 253ಕ್ಕೇರಿದ ಸಾವಿನ ಸಂಖ್ಯೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರಣಾರ್ಭಟ ಮುಂದುವರಿದಿದೆ. ಇಂದು ಕೂಡ 7 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 253ಕ್ಕೇರಿದೆ. ಕಳೆದ 48 ಗಂಟೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿಗೆ 27 ಮಂದಿ ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ, ಬೆಂಗಳೂರು, ಬೀದರ್ ನಲ್ಲಿ ತಲಾ 2, ದಕ್ಷಿಣ ಕನ್ನಡ, ಹಾಸನ, ಬೆಳಗಾವಿಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು 292 ಸೋಂಕಿತ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 191 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಸಾವನ್ನಪ್ಪಿದವರ ವಿವರ:
1) ರೋಗಿ-12726: ಬೆಂಗಳೂರಿನ 50 ವರ್ಷದ ಪುರುಷ. ತೀವ್ರ ಉಸಿರಾಟ ತೊಂದರೆ (ಸಾರಿ), ಜ್ವರ ಲಕ್ಷಣಗಳು ಕಾಣಿಸಿಕೊಂಡಿತ್ತು. ಅಲ್ಲದೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಇವರನ್ನು ಜೂನ್ 27 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 1 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
Advertisement
2) ರೋಗಿ-13261: ಬೆಂಗಳೂರಿನ 50 ವರ್ಷದ ಮಹಿಳೆ. ವಿಷಮ ಶೀತ ಜ್ವರದ (ಐಎಲ್ಐ), ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಜೂನ್ 29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ತಮಾ ಸಮಸ್ಯೆ ಎದುರಿಸುತ್ತಿದ್ದ ಮಹಿಳೆ ಜೂನ್ 30 ರಂದು ಸಾವನ್ನಪ್ಪಿದ್ದರು.
Advertisement
3) ರೋಗಿ-14344: ದಕ್ಷಿಣ ಕನ್ನಡದ 72 ವರ್ಷದ ವೃದ್ಧ. ತೀವ್ರ ಉಸಿರಾಟ ತೊಂದರೆ (ಸಾರಿ), ಜ್ವರ, ಕೆಮ್ಮನಿಂದ ಬಳಲುತ್ತಿದ್ದರು. ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆ ಎದುರಿಸುತ್ತಿದ್ದವರನ್ನು ಜೂನ್ 30 ಆಸ್ಪತ್ರೆ ದಾಖಲಿಸಲಾಗಿತ್ತು. ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
4) ರೋಗಿ-15272: ಬೆಳಗಾವಿಯ 72 ವರ್ಷದ ವೃದ್ಧ. ವಿಷಮ ಶೀತ ಜ್ವರದ (ಐಎಲ್ಐ), ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 1 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
5) ರೋಗಿ-15471: ಬೀದರ್ನ 80 ವರ್ಷದ ವೃದ್ಧ. ತೆಲಂಗಾಣ ಪ್ರಯಾಣದ ಹಿನ್ನೆಲೆ. ಜ್ವರ ಮತ್ತು ಕೆಮ್ಮು, ಮಧುಮೇಹದ ಸಮಸ್ಯೆಯಿಂದ ಜೂನ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಜುಲೈ 1 ರಂದು ಸಾವನ್ನಪ್ಪಿದ್ದರು.
6) ರೋಗಿ-15474: ಬೀದರ್ನ 63 ವರ್ಷದ ವೃದ್ಧ. ತೆಲಂಗಾಣದ ಪ್ರಯಾಣದ ಹಿನ್ನೆಲೆ. ತೀವ್ರ ಉಸಿರಾಟ ತೊಂದರೆ (ಸಾರಿ)ಯಿಂದ ಜೂನ್ 20 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 1 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
7) ರೋಗಿ-15639: ಹಾಸನದ 30 ವರ್ಷದ ಪುರುಷ. ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ. ಜೂನ್ 29 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೆ ಜೂನ್ 30 ರಂದು ಸಾವನ್ನಪ್ಪಿದ್ದರು.