– ಮಾನವೀಯ ಸಂಬಂಧವನ್ನೇ ಕಟ್ ಮಾಡುತ್ತೆ
– ಇದರ ಸಹವಾಸ ಸಾಕಪ್ಪ
ಬೆಂಗಳೂರು: ಇಂದಿನಿಂದ ವಿಧಾನಸಭಾ ಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಸಂತಾಪ ಸೂಚನೆ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದರು.
Advertisement
ನನಗೆ, ನನ್ನ ಹೆಂಡತಿಗೆ, ಮಗನಿಗೆ ಕೊರೊನಾ ಬಂದುಬಿಟ್ಟಿತ್ತು. ಯಾರೂ ನಮ್ಮ ನೋಡಂಗಿಲ್ಲ, ನಮ್ಮ ಹತ್ರ ಬರಂಗಿಲ್ಲ. ಯಾರಿಗೆ ಕೊರೊನಾ ಬಂದಿದೆಯೋ ಅವರು ಯಾರೂ ಭಯಪಡಬೇಕಿಲ್ಲ ಎಂದರು. ಇದನ್ನು ಓದಿ: ಕೊರೊನಾ ಹೆಚ್ಚಾಗಿದ್ದು ನಿಮ್ಮಿಂದಲೇ- ಅಧಿವೇಶನ ಮೊಟಕುಗೊಳಿಸಲು ಸಿದ್ದು ವಿರೋಧ
Advertisement
Advertisement
ಈ ಕೊರೊನಾ ಇದ್ಯಲ್ಲಾ ಇದು ಬಹಳ ಅಪಾಯಕಾರಿ. ಅದರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಈಶ್ವರಪ್ಪನಿಗೂ ಬಂದಿತ್ತು ಅಂತ ಕಾಣಿಸುತ್ತೆ. ನಮ್ಮ ಅಧ್ಯಕ್ಷನಿಗೂ ಕೊರೊನಾ ಬಂದ ನಂತರ ಅಲರ್ಟ್ ಆಗಿದ್ದಾರೆ. ಈ ಕಾಯಿಲೆ ಮಾನವೀಯ ಸಂಬಂಧವನ್ನೇ ಕಟ್ ಮಾಡುತ್ತೆ ಎಂದು ಹೇಳಿದರು.
Advertisement
ನನ್ನ ಹೆಂಡತಿ, ಮಗ ನನ್ನನ್ನು ನೋಡೋಕೆ ಅವಕಾಶ ಸಿಗ್ಲಿಲ್ಲ. ನನಗೆ, ನನ್ನ ಪತ್ನಿ, ಮಗನಿಗೂ ಕೊರೊನಾ ಬಂತು. ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದವರಿಗೂ ಬಂತು. ಮೈಸೂರಿನಿಂದ ಕರೆತಂದು ಅಡಿಗೆ ಮಾಡಿಸುವಂತಾಯ್ತು. ಇದರ ಸಹವಾಸ ಸಾಕಪ್ಪ. ಇದರಿಂದ ಬಚಾವ್ ಆಗೋದೇ ಕಷ್ಟ ಎಂದು ತಿಳಿಸಿದರು.
ಸೋಶಿಯಲ್ ಡಿಸ್ಟನ್ಸ್, ಮಾಸ್ಕ್ ಹಾಕುವುದು ಕಡ್ಡಾಯ. ಇದರಿಂದಷ್ಟೇ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದು. ಆದರೆ ಕೊರೊನಾ ಬಂದವರು ಭಯಪಡಬೇಕಿಲ್ಲ ಎಂದು ಸಲಹೆ ನೀಡಿದರು.