ಲಂಡನ್: ಕೊರೊನಾ ಮೂರನೇ ಅಲೆಯಲ್ಲಿ ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಭಾರತವೂ ಸೇರಿದಂತೆ ಅನೇಕ ರಾಷ್ಟ್ರದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಕಾರಿಯಲ್ಲ ಎಂದು ಲಂಡನ್ ಕಾಲೇಜಿನ ಅಧ್ಯಯನ ತಂಡವೊಂದು ವರದಿ ಮಾಡಿದೆ.
Advertisement
ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎಂದು ಹೇಳಲಾಗುತ್ತಿದೆ. ಅದರೆ ಮಕ್ಕಳ ಮೇಲೆ ಕೊರೊನಾ ಎಫೆಕ್ಟ್ ಕಡಿಮೆ ಎಂದು ಲಂಡನ್ನ ತಜ್ಞರು, ಲಂಡನ್ ನ ಸಂಶೋಧಕರು ನಡೆಸಿರುವ ಅಧ್ಯಯನದಿಂದ ಸಿಹಿ ಸುದ್ದಿ ಹೊರಬಿದ್ದಿದೆ. ಲಂಡನ್ನ ಕಿಂಗ್ಸ್ ಕಾಲೇಜಿನ ತಜ್ಞರ ತಂಡವೊಂದು ಕೋವಿಡ್-19 ಮಕ್ಕಳ ಮೇಲೆ ಹೇಗೆ ಪರಿಣಾಮವನ್ನು ಬೀರಿದೆ ಎನ್ನುವುದರ ಮೇಲೆ ಅಧ್ಯಯನ ನಡೆಸಿದೆ.
Advertisement
Advertisement
ಅಧ್ಯಯನದಲ್ಲಿ ಮಕ್ಕಳ ಮೇಲೆ ಕೊರೊನಾ ಎಫೆಕ್ಟ್ ಕಡಿಮೆ ಎಂಬ ವರದಿ ಮಾಡಲಾಗಿದ್ದು, ಸೋಂಕಿಗೆ ಒಳಗಾಗಿದ್ದ 25 ಸಾವಿರ ಮಕ್ಕಳ ಬಗ್ಗೆ ಅಧ್ಯಯನ ಮಾಡಿರುವ ತಂಡವೂ ಸೆಪ್ಟೆಂಬರ್ 2020 ರಿಂದ ಫೆಬ್ರವರಿ 2021 ರ ಅವಧಿಯಲ್ಲಿ ಸೋಂಕಿಗೆ ಒಳಗಾದ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕಿದೆ. ಸೋಂಕಿಗೆ ಒಳಗಾದ ಪೋಷಕರಿಂದ ಮಾಹಿತಿ ಕಲೆ ಹಾಕಿ ಮಕ್ಕಳ ಮೇಲೆ ಕೋವಿಡ್ ಯಾವ ರೀತಿ ಪ್ರಭಾವ ಬೀರಿತ್ತು, ಮತ್ತು ಎಷ್ಟು ದಿನಗಳಲ್ಲಿ ಮಕ್ಕಳು ಗುಣಮುಖರಾಗಿದ್ದರು. ಎನ್ನುವುದನ್ನು ಡೇಟಾ ಸಂಗ್ರಹ ಮಾಡಿ ವರದಿ ಸಿದ್ಧಪಡಿಸಿದೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸುವ ಬಗ್ಗೆ ಪುರಾವೆಗಳಿಲ್ಲ: ಡಾ.ವಿ.ಕೆ.ಪೌಲ್
Advertisement
ಕೋವಿಡ್ಗೆ ಒಳಗಾದ ಮಕ್ಕಳು 4 ರಿಂದ 6 ದಿನಗಳಲ್ಲಿ ಗುಣಮುಖರಾಗಿದ್ದಾರೆ. ಜೊತೆಗೆ 4 ವಾರಕ್ಕಿಂತ ಹೆಚ್ಚು ದಿನಗಳಲ್ಲಿ ಕೋವಿಡ್ ನ ಲಕ್ಷಣಗಳಿಂದ ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದಾರೆ. ಹಿರಿಯರಲ್ಲಿ ದೀರ್ಘಾವಧಿಯರೆಗೆ ರೋಗ ಲಕ್ಷಣಗಳು ಇರುತ್ತದೆ. ಆದರೆ ಮಕ್ಕಳಿಗೆ ಸೋಂಕು ತಗುಲಿದ ಕೆಲವೇ ದಿನಗಳಲ್ಲಿ ಸೋಂಕಿನ ಲಕ್ಷಣಗಳಿಂದ ಮುಕ್ತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.