ಚಿಕ್ಕಬಳ್ಳಾಪುರ: ಕೊರೊನಾ ಆತಂಕದ ಮಧ್ಯೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿಯ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಬೆಳ್ಳಂಬೆಳಗ್ಗೆ ಸಾವಿರಾರು ಪ್ರವಾಸಿಗರ ದಂಡು ಆಗಮಿಸಿದೆ. ಕಾರು-ಬೈಕ್ ಗಳಲ್ಲಿ ನಂದಿಬೆಟ್ಟಕ್ಕೆ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ.
Advertisement
Advertisement
ಕೊರೊನಾ ಎರಡನೇ ಅಲೆ ಆತಂಕದ ನಡುವೆಯೂ ನಂದಿ ಬೆಟ್ಟಕ್ಕೆ ಜನ ಬರುತ್ತಿರುವುದು ಆತಂಕ ಸೃಷ್ಟಿಸಿದೆ. ಮಾಸ್ಕ್ ಧರಿಸದೆ ಕೆಲ ಪ್ರವಾಸಿಗರ ನಿರ್ಲಕ್ಷ್ಯ ವಹಿಸುತ್ತಿದ್ದು, ಸಾಮಾಜಿಕ ಅಂತರ ಕೂಡ ಮಾಯವಾಗಿದೆ.
Advertisement