ಕ್ಯಾನ್ಬೆರಾ: ಮಧ್ಯದಲ್ಲಿ ದಿಢೀರ್ ಕುಸಿತ ಕಂಡರೂ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ಶತಕದ ಜೊತೆಯಾಟದಿಂದ ಭಾರತ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 303 ರನ್ಗಳ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ 26 ರನ್ ಗಳಿಸಿದ್ದಾಗ 16 ರನ್ ಹೊಡೆದಿದ್ದ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತ್ತು. ನಂತರ ಶುಭಮನ್ ಗಿಲ್ 33 ರನ್ ಹೊಡೆದು ಔಟಾದರು.
Advertisement
Advertisement
22.3 ಓವರ್ಗೆ 2 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ನಂತರ 38 ರನ್ ಗಳಿಸುವಷ್ಟರಲ್ಲಿ ಅಮೂಲ್ಯವಾದ ಮೂರು ವಿಕೆಟ್ ಕಳೆದುಕೊಂಡಿತು.ಕೊಹ್ಲಿ 63 ರನ್( 78 ಎಸೆತ, 5 ಬೌಂಡರಿ), ಶ್ರೇಯಸ್ ಅಯ್ಯರ್ 19 ರನ್, ಕೆಎಲ್ ರಾಹುಲ್ 5 ರನ್ ಗಳಿಸಿ ಔಟಾದರು.
Advertisement
32ನೇ ಓವರ್ಗೆ 152 ರನ್ ಆಗಿದ್ದಾಗ ಕೊಹ್ಲಿ ಔಟಾದರು. ನಂತರ ಬಂದ ಜಡೇಜಾ ಜೊತೆ ಪಾಂಡ್ಯ ಸೇರಿ ರನ್ ಸೇರಿಸತೊಡಗಿದರು. ಇಬ್ಬರು ಮುರಿಯದ 6ನೇ ವಿಕೆಟ್ಗೆ 108 ಎಸೆತಗಳಲ್ಲಿ 150 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
Advertisement
ಪಾಂಡ್ಯ 55 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ ಅಂತಿಮವಾಗಿ ಔಟಾಗದೇ 92 ರನ್(76 ಎಸೆತ, 7 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಸಾಥ್ ನೀಡಿದ್ದ ಜಡೇಜಾ ಔಟಾಗದೇ 66 ರನ್(50 ಎಸೆತ, 5 ಬೌಂಡರಿ, 3 ಸಿಕ್ಸರ್) ಹೊಡೆದರು. ಕೊನೆಯ 52 ಎಸೆತದಲ್ಲಿ ಈ ಜೋಡಿ 100 ರನ್ ಹೊಡೆದ ಪರಿಣಾಮ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಸ್ಟ್ರೇಲಿಯಾ ಇತರೇ ರೂಪದಲ್ಲಿ 8 ರನ್ ನೀಡಿತ್ತು.
ರನ್ ಏರಿದ್ದು ಹೇಗೆ?
50 ರನ್ – 62 ಎಸೆತ
100 ರನ್ – 20 ಎಸೆತ
150 ರನ್ -191 ಎಸೆತ
200 ರನ್ – 250 ಎಸೆತ
250 ರನ್ – 282 ಎಸೆತ
300 ರನ್ – 299 ಎಸೆತ
Jadeja clears the rope – and these two have put on 100+ now!
Live #AUSvIND: https://t.co/L7AjidJPm9 pic.twitter.com/ijwKEZz37d
— cricket.com.au (@cricketcomau) December 2, 2020