ಮಡಿಕೇರಿ: ಕೊಡಗಿನ ಯುವಕರೊಬ್ಬರಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ.
ಮೂಲತಃ ಕೊಡಗಿನ ಶುಂಠಿಕೊಪ್ಪ ಸಮೀಪದ ಕಲ್ಲೂರು ಗ್ರಾಮದ ಪ್ರಶಾಂತ್ ಕಲ್ಲೂರು ಅವರಿಗೆ ಪ್ರಶಸ್ತಿ ಸಿಕ್ಕಿದೆ. ಪ್ರಶಾಂತ್ರವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ. ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಪ್ರಶಾಂತ್ ತಮ್ಮ ಕಲ್ಲೂರ್ ಸಿನಿಮಾಸ್ ಮೂಲಕ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ತಮ್ಮದೇ ಆದ ಸಾಫ್ಟ್ ವೇರ್ ಕಂಪೆನಿಯೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಪ್ರಶಾಂತ್ ಬಸವಜ್ಯೋತಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ.
Advertisement
Advertisement
ವೀರಶೈವ ಲಿಂಗಾಯತ ಯುವ ವೇದಿಕೆ ಮೂಲಕ ಹಲವಾರು ವರ್ಷಗಳ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಸೇವೆಯನ್ನು ಗುರುತಿಸಿ ಫಾಲ್ಕೆ ಕುಟುಂಬಸ್ಥರು ಪ್ರತಿಷ್ಠಿತ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಜುಲೈ 11 ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾಲ್ಕೆ ಅವರ ಮೊಮ್ಮಗ ಚಂದ್ರಶೇಖರ್ ಫಾಲ್ಕೆ ಹಾಗೂ ಚಿತ್ರನಟ ಸುಮನ್ ತಲ್ವಾರ್ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ:ಕೊಡಗಿನಲ್ಲಿ ಗಾಳಿ ಸಹಿತ ಮಳೆ ಅರ್ಭಟ – ಉಕ್ಕಿ ಹರಿಯುತ್ತಿರುವ ನದಿಗಳು
Advertisement