– ಲಕ್ಷಾಂತರ ಮೌಲ್ಯದ ಕೊಕೇನ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರನ್ನ ಕೊಕೇನ್ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ಪ್ರಕಟನೆ ಹೊರಡಿಸಿದ್ದಾರೆ. ಶುಕ್ರವಾರ ಪಮೇಲಾ ಅವರನ್ನ ಪೊಲೀಸರು ಬಂಧಿಸಿದ್ದು, 100 ಗ್ರಾಂ ಕೊಕೇನ್ ಪರ್ಸ್ ನಲ್ಲಿಸಿ ಕಾರಿನೊಳಗೆ ಇರಿಸಿದ್ದರು ಎಂದು ವರದಿಯಾಗಿದೆ.
ನ್ಯೂ ಅಲಿಪೋರಾದಲ್ಲಿ ಪಮೇಲಾ ಅವರ ಬಂಧನವಾಗಿದ್ದು, ಕಾರಿನಲ್ಲಿ ಇವರ ಜೊತೆಯಲ್ಲಿದ್ದ ಪ್ರಬೀರ್ ಕುಮಾರ್ ದೇ ಅವರನ್ನ ಸಹ ಪೊಲೀಸರು ಬಂಧಿಸಿದ್ದಾರೆ. ಪಮೇಲಾ ಮತ್ತು ಪ್ರಬೀರ್ ಜೊತೆಯಾಗಿ ಎನ್.ಆರ್.ಅವೆನ್ಯೂನಲ್ಲಿರುವ ಕೆಫೆಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಪೊಲೀಸರು ಕಾರ್ ತಪಾಸಣೆ ನಡೆಸಿದಾಗ ಸೀಟಿನಡಿ ಪರ್ಸ್ ನಲ್ಲಿ 100 ಗ್ರಾಂ ಕೊಕೇನ್ ಲಭ್ಯವಾಗಿದೆ.
Advertisement
Advertisement
ಪಮೇಲಾ ಮತ್ತು ಪ್ರಬೀರ್ ಬಂಧನ ರಾಜಕೀಯ ತಿರುವು ಪಡೆದುಕೊಂಡಿದ್ದು, ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳ ಪೊಲೀಸರ ನಿಯಂತ್ರಣದಲ್ಲಿ ಏನು ಬೇಕಾದ್ರೂ ಆಗುವ ಸಾಧ್ಯತೆಗಳಿವೆ. ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಕೊಕೇನ್ ಇರಿಸಿರುವ ಸಾಧ್ಯತೆಗಳಿವೆ ಎಂದು ಬಿಜೆಪಿ ವಕ್ತಾರ ಸಮೀಕ್ ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಬಿಜೆಪಿಗರ ಅಸಲಿ ಮುಖ ಜನರ ಮುಂದೆ ಬರುತ್ತಿದೆ. ಈ ರೀತಿಯ ಘಟನೆ ಪಶ್ವಿಮ ಬಂಗಾಳಕ್ಕೆ ಅವಮಾನಕರ. ಈ ಹಿಂದೆ ಬಿಜೆಪಿ ನಾಯಕರ ಮಕ್ಕಳು ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದರು ಎಂದು ಟಿಎಂಸಿ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಆರೋಪಿಸಿದ್ದಾರೆ.