ಬೀಜಿಂಗ್: ಕೇವಲ 2,500 ರೂಪಾಯಿಗೆ ಖರೀದಿಸಿದ 15ನೇ ಶತಮಾನದ ಪಿಂಗಾಣಿ ಪಾತ್ರೆ ಒಂದನ್ನು 3.6 ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ವ್ಯಕ್ತಿಯೋರ್ವ ಕೋಟ್ಯಧಿಪತಿಯಾಗಿದ್ದಾನೆ.
Advertisement
ಬಿಳಿ ಬಣ್ಣದ ಪಾತ್ರೆ ಯಲ್ಲಿ ನೀಲಿ ಬಣ್ಣದ ಹೂವಿನ ಚಿತ್ರವಿದ್ದು ಈ ಪಿಂಗಾಣಿ 15 ಶತಮಾನಗಳ ಹಿಂದಿನದೆಂದು ವರದಿಯಾಗಿದ್ದು, ಕನೆಕ್ಟಿಕಟ್ನ ನ್ಯೂ ಹೆವನ್ ಪ್ರದೇಶದಲ್ಲಿ ಪ್ರಾಚೀನ ವಸ್ತುಗಳ ಸಂಗ್ರಹ ಮಾಡುವ ಉತ್ಸಹಿಯೋರ್ವ 3.6 ಕೋಟಿ ರೂಪಾಯಿ ಕೊಟ್ಟು ಈ ಪಿಂಗಾಣಿಯನ್ನು ಖರೀದಿಸಿದನೆಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Advertisement
ಪಿಂಗಾಣಿಯು 6 ಇಂಚು ಅಗಲ ಹೊಂದಿದ್ದು, ದೇಶದ 7 ಅದ್ಭುತ ಪಿಂಗಾಣಿಗಳಲ್ಲಿ ಇದು ಒಂದಾಗಿದೆ. ಈ ಪಿಂಗಾಣಿಯನ್ನು ನ್ಯೂಯಾರ್ಕ್ನಲ್ಲಿ ನಡೆಯುವ ಹರಾಜಿನಲ್ಲಿ ಇಡಲಾಗಿತ್ತು. ಹರಾಜಿನಲ್ಲಿ ವ್ಯಕ್ತಿಯೊಬ್ಬರು 2,500 ಕೊಟ್ಟು ಖರೀದಿಸಿದ್ದನೆಂದು ತಿಳಿದುಬಂದಿದೆ. ಆತ ಮನೆಗೆ ತಂದು ಚೀನಾದ ಪಿಂಗಾಣಿ ತಜ್ಞರ ಬಳಿ ಕೇಳಿದಾಗ ಇದು ತುಂಬಾ ಬೆಲೆ ಬಾಳುವಂತದ್ದು ಎಂದು ತಿಳಿದು 3.6 ಕೋಟಿಗೆ ಮಾರಾಟಮಾಡಿ ಕೋಟ್ಯಧಿಪತಿಯಾಗಿದ್ದಾನೆ.
Advertisement
Advertisement
ಪಿಂಗಾಣಿ ತಜ್ಞರ ಪ್ರಕಾರ ಇದು ತುಂಬಾ ಮೃದುವಾಗಿದೆ ಮತ್ತು ಬಣ್ಣ ಹಾಗೂ ಅದರ ಡಿಸೈನ್ ವಿಶೇಷವಾಗಿದ್ದು, ಬಹಳ ಹಿಂದಿನ ಕಾಲದ ಪಿಂಗಾಣಿಯಂತೆ ಕಂಡುಬರುತ್ತಿದೆ ಎಂದಿದ್ದಾರೆ.