ಹುಬ್ಬಳ್ಳಿ: ಕಿಮ್ಸ್ನಿಂದ ಶುಕ್ರವಾರ ಬೆಳಿಗ್ಗೆ ಪರಾರಿಯಾಗಿದ್ದ ಕೊರೊನಾ ಸೋಂಕಿತ ರಾತ್ರಿ ಗದಗದಲ್ಲಿ ಸಿಕ್ಕು ಬಿದ್ದಿದ್ದಾನೆ. ಇದರಿಂದಾಗಿ ಜಿಲ್ಲಾಡಳಿತ ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.
ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಕೊರೊನಾ ಸೋಂಕಿತ ಆರೋಪಿ ಶುಕ್ರವಾರ ಬೆಳಗ್ಗೆ 5.30ರ ಸುಮಾರಿಗೆ ಐಸೋಲೇಷನ್ ವಾರ್ಡ್ನಿಂದ ಹೊರಬಂದ 55 ವರ್ಷದ ಸೋಂಕಿತ ಆರೋಪಿ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದ. ಬೆಳಗ್ಗೆ ವೈದ್ಯರು ಚಿಕಿತ್ಸೆ ನೀಡಲು ತೆರಳಿದ ವೇಳೆ ಇದು ಬೆಳಕಿಗೆ ಬಂದಿತ್ತು. ಈತನನ್ನು ಕಾಯ್ದುಕೊಳ್ಳಲು ಇಬ್ಬರು ಪೊಲೀಸರು ಕರ್ತವ್ಯದಲ್ಲಿದ್ದರು. ಇದರೊಂದಿಗೆ ಕಿಮ್ಸ್ನ ದ್ವಾರದ ಬಳಿ ಭದ್ರತಾ ಸಿಬ್ಬಂದಿಯೂ ಇತ್ತು. ಇವರೆಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದ.
Advertisement
Advertisement
ಸಂಜೆ ವೇಳೆ ಗದಗ ಮನೆಯಲ್ಲಿ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದು, ಇಂದು ನಸುಕಿನ ಜಾವ ಕಿಮ್ಸ್ನಿಂದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು ಸೋಂಕಿತನ ಹುಡುಕಾಟಕ್ಕೆ ಬಲೆ ಬಿಸಿದ್ದರು. ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಎರಡು ದಿನದ ಹಿಂದೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.
Advertisement
ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಮುಷ್ಟಿಗೇರಿಯವನಾದ ಈತ ಸದ್ಯ ಗದಗದ ಬೆಟಗೇರಿಯ ಮಿಷನ್ ಕಾಂಪೌಂಡ್ ಚರ್ಚ್ ಬಳಿಯ ನಿವಾಸಿಯಾಗಿದ್ದು, ಶುಕ್ರವಾರ ಸಂಜೆ ಗದಗ ಪೊಲೀಸರ ನೆರವಿನೊಂದಿಗೆ ಈತನ ಮನೆಗೆ ತೆರಳಿ ಹುಬ್ಬಳ್ಳಿ ಪೊಲೀಸರು ಕರೆದುಕೊಂಡು ಬಂದು ಪುನಃ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಲಾರಿಯಲ್ಲಿ ತೆರಳಿದ್ದ: ಈತ ಕಿಮ್ಸ್ನಿಂದ ತಪ್ಪಿಸಿಕೊಂಡು, ಲಾರಿ ಮೂಲಕ ಗದಗಗೆ ತೆರಳಿ ತನ್ನ ಮನೆಯಲ್ಲಿದ್ದ. ಈತ ಹೋದ ಲಾರಿ ಚಾಲಕ ಹಾಗೂ ಕ್ಲೀನರ್ ಸಂಪರ್ಕ ಹೊಂದಿದ ಕಾರಣ ಅವರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಅವರ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ.
ನೀಲಿಜಿನ್ ರಸ್ತೆಯಲ್ಲಿ ಎರಡು ಹಾರ್ಡ್ವೇರ್ ಅಂಗಡಿಯಲ್ಲಿ ಪರಿಕರಗಳನ್ನು ಈತ ಕಳ್ಳತನ ಮಾಡಿದ್ದ. ಜೂ. 28ರಂದು ಈತನನ್ನು ಉಪನಗರ ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ತಪಾಸಣೆ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈತನಿಂದಲೇ ಒಬ್ಬ ಪೇದೆಗೂ ಕೊರೊನಾ ದೃಢಪಟ್ಟಿದೆ. ಅಲ್ಲದೇ, 24 ಜನ ಪೊಲೀಸರು ಕ್ವಾರಂಟೈನ್ ಮಾಡಲಾಗಿದೆ. ಕಳ್ಳ ನಾಪತ್ತೆಯಾಗಿದ್ದರಿಂದ ನಗರದಲ್ಲಿ ಆತಂಕವುಂಟಾಗಿತ್ತು. ಇದೀಗ ಈತ ಸಿಕ್ಕಿಬಿದ್ದಿರುವುದು ಜಿಲ್ಲಾಡಳಿತ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.