– ನಾಳೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ
– 8 ವಲಯಗಳಿಗೆ 90 ಸಾವಿರ ಲಸಿಕೆ ಹಂಚಿಕೆ
ಬೆಂಗಳೂರು : ನಗರದ ಸೆಂಟ್ ಫಿಲೋಮೀನಾ ನರ್ಸಿಂಗ್ ಕಾಲೇಜಿನಲ್ಲಿಂದು ಲಸಿಕೆ ಅಭಿಯಾನ ನಡೆಯಿತು. ಕೊರೋನಾ ಸಂಜೀವಿನಿ ನೀಡಲು ಎರಡನೆ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಇಂದು ವಿದ್ಯಾರ್ಥಿಗಳ ಪಟ್ಟಿ ಮಾಡಿರುವುದು ಹೆಚ್ಚು ಗಮನಾರ್ಹವಾಗಿತು.
ನಿನ್ನೆ ಇಡೀ ದಿನ ಆಸ್ಪತ್ರೆ ಸಿಬ್ಬಂದಿಗೆ ಲಸಿಕೆ ಕೊಡಲಾಯಿತು. ಆದರೆ ಇವತ್ತು ಇಂದೇ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಲಸಿಕೆ ಕೇಂದ್ರದಲ್ಲಿ ನೀಡಲು ವ್ಯವಸ್ಥೆ ಆಗಿತ್ತು.
Advertisement
Advertisement
Advertisement
ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯನ್ನು ಚಾಚು ತಪ್ಪದೇ ಪಾಲನೆ ಮಾಡಲಾಗಿತ್ತು. ಒನ್ ಎಂಟ್ರಿ ,ಒನ್ ಎಕ್ಸಿಟ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಬ್ಯಾನರ್ಸ್ , ಪೋಸ್ಟರ್, ಐಇಸಿ(ಇನ್ಪಾರ್ಮೆಷನ್ ಎಜುಕೇಶನ್ ಆಂಡ್ ಕಮ್ಯೂನಿಕೇಷನ್) ಎಲ್ಲವೂ ಪಕ್ಕಾ ಸಿದ್ಧಪಡಿಸಲಾಗಿತ್ತು.
Advertisement
ಮೊದಲು ಲಸಿಕೆ ಪಡೆದ ನರ್ಸಿಂಗ್ ವಿದ್ಯಾರ್ಥಿ ಆನ್ಸಿ ಅಂಟೋನಿಗೆ ಲಸಿಕೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ವ್ಯಾಕ್ಸಿನ್ ಸಿಕ್ಕಿದ್ದರಿಂದ ಸೇವೆ ಮಾಡಲು ಧೈರ್ಯ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ: ಸೋಮವಾರ ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಲಭ್ಯವಿರಲಿದೆ. ಸರಿಸುಮಾರು 14,100 ಬಿಬಿಎಂಪಿ ಆಸ್ಪತ್ರೆಗಳಲ್ಲೇ ಕೊರೋನಾ ಲಸಿಕೆ ಕೊಡಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಪ್ರಕಾರ ಪ್ರತಿ ಕೇಂದ್ರಕ್ಕೂ 90 ರಿಂದ 100 ಮಂದಿಗೆ ಲಸಿಕೆ ಹಂಚಿಕೆ ಮಾಡಲಾಗಿದೆ.
ಎಲ್ಲ ಪಿ ಎಚ್ ಸೆಂಟರ್ ಗಳಿಗೂ ಲಸಿಕೆ ಹಂಚಿಕೆ ಪೂರ್ಣವಾಗಿದ್ದು, ನಗರದ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಹಂಚಿಕೆ ಪ್ರಕಿಯೆ ಪೂರ್ಣವಾಗಿದೆ. ಈ ಪ್ರಕಾರ ಬರೊಬ್ಬರಿ 90 ಸಾವಿರ ಲಸಿಕೆ 8 ವಲಯಗಳಿಗೂ ಹಂಚಿಕೆ ಆಗಿದೆ.
ನಾಳೆ ನಗರದಲ್ಲಿ ಲಸಿಕೆ ನೀಡುವ ಕೇಂದ್ರಗಳಿಗೆ ಸವಲತ್ತು ಪೂರೈಕೆ ಆಗಿದೆ. ಸದ್ಯ ದಾಸಪ್ಪ ಆಸ್ಪತ್ರೆಯಲ್ಲಿ ಸುಮಾರು 7 ಸಾವಿರ ಲಸಿಕೆ ಮಾತ್ರ ಉಳಿದಿದೆ. ಫಲಾನುಭವಿಗಳ ಪಟ್ಟಿಯಾದ ಕೂಡಲೇ ಸೆಂಟರ್ ಗಳಿಗೆ ಕಳಿಸುವ ಲೆಕ್ಕಚಾರ ಆಗಿದೆ ಎಂದು ದಾಸಪ್ಪ ಆಸ್ಪತ್ರೆ ಸ್ಟೋರೇಜ್ ಮೇಲ್ವಿಚಾರಕಿ ಮಂಜುಳ ತಿಳಿಸಿದ್ದಾರೆ.