ಉಡುಪಿ: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 2020ರಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ರೂ.629.03 ಕೋಟಿ ರೂಪಾಯಿ ಅನುಮೋದನೆ ನೀಡಿದೆ ಎಂದು ಕೃಷಿ- ರಾಜ್ಯ ರೈತರ ಕಲ್ಯಾಣ ಸಚಿವೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Advertisement
ಮಹಾರಾಷ್ಟ್ರಕ್ಕೆ ರೂ.701.00 ಕೋಟಿಗಳ ನೆರವಿನ ಅನುಮೋದನೆಯನ್ನು ಎಸ್ಡಿಆರ್ಎಫ್ ಮಾನದಂಡಗಳ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದೆ. ಅನಾವೃಷ್ಟಿ ಕಾರಣದಿಂದ 2020ನೇ ವರ್ಷದಲ್ಲಿ ರಾಜಸ್ಥಾನದಲ್ಲಿನ ಕೃಷಿ ಸಮುದಾಯಕ್ಕೆ ಅಪಾರ ಬೆಳೆ ನಷ್ಟ ಉಂಟಾಗಿದ್ದು, ಕೇಂದ್ರ ಸರಕಾರ ಈ ಬೆಳೆ ನಷ್ಟಕ್ಕೆ ನೆರವಿನ ರೂಪದಲ್ಲಿ ರೂ.113.69 ಕೋಟಿಗಳನ್ನು ಎಸ್ಡಿಆರ್ಎಫ್ ಮಾನದಂಡಗಳ ಅಡಿಯಲ್ಲಿ ಅನುಮೋದಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ಬಿಎಸ್ವೈ ನಿವಾಸದಲ್ಲಿ ಶಾಸಕರ ಲಾಬಿ
Advertisement
Advertisement
2020-21 ನೇ ವರ್ಷದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಒಟ್ಟು 67.96 ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ವಿಮೆಗೆ ಒಳಪಡಿಸಿಲಾಗಿತ್ತು. ಈ ಸಾಲಿನ ಖಾರಿಫ್ ಮತ್ತು ರಬಿಯಲ್ಲಾದ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಒಟ್ಟು ರೂ. 750.12 ಕೋಟಿ ಬಿಡುಗಡೆ ಮಾಡಿದ್ದು, 11.43 ಲಕ್ಷ ರೈತರು ಇದರ ಫಲಾನುಭವವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್ – ಬಿಕ್ಕಿ ಬಿಕ್ಕಿ ಅತ್ತ ಸಂಬರಗಿ
Advertisement
ಈ ಕುರಿತು ಚುಕ್ಕೆಗುರಿತನ ಪ್ರಶ್ನೆಗೆ ಲೋಕಸಭೆಯಲ್ಲಿ ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವರು ಉತ್ತರಿಸಿದ್ದು, ಮಾನ್ಯ ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರು ಈ ಮಾಹಿತಿಯನ್ನು ನೀಡಿದ್ದಾರೆ.