ದುಬೈ: 2020ರ ಐಪಿಎಲ್ ಆವೃತ್ತಿಯ ಇಂದಿನ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದ್ದು, ಕನ್ನಡಿಗರ ನಡುವಿನ ಬಿಗ್ಫೈಟ್ ಎಂದೇ ಈ ಪಂದ್ಯವನ್ನು ಕರ್ನಾಟಕದ ಅಭಿಮಾನಿಗಳು ಕರೆದಿದ್ದಾರೆ.
Advertisement
ಇತ್ತಂಡಳಿಗೂ ಟೂರ್ನಿಯಲ್ಲಿ ಇದು 2ನೇ ಪಂದ್ಯವಾಗಿದ್ದು, ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಪಡೆದಿದ್ದ ಆರ್ಸಿಬಿ ವಿಶ್ವಾಸದಿಂದ ಇದ್ದರೆ, ಪಂಜಾಬ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ಕಹಿಯೊಂದಿಗೆ ಕಣಕ್ಕಿಳಿಯುತ್ತಿದೆ.
Advertisement
Advertisement
ಪಂಜಾಬ್ ತಂಡದಲ್ಲಿ ಕನ್ನಡಿಗರು ಪ್ರಮುಖ ಪಾತ್ರ ವಹಿಸಿದ್ದು, ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭಿಕರಾಗಿ ಮಯಾಂಕ್ ತಮ್ಮ ಸಾಮರ್ಥ್ಯವನ್ನು ಮೊದಲ ಪಂದ್ಯದಲ್ಲೇ ಸಾಬೀತು ಪಡಿಸಿದ್ದು, ಡೆಲ್ಲಿ ವಿರುದ್ಧ 60 ಎಸೆತಗಳಲ್ಲಿ 89 ರನ್ ಸಿಡಿಸಿ ಮಿಂಚಿದ್ದರು.
Advertisement
ಇತ್ತ ಆರ್ಸಿಬಿ ಪರ ಕನ್ನಡಿಗ, ಯುವ ಆಟಗಾರ ದೇವದತ್ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದು, ಡೆಬ್ಯು ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ್ದರು. ಸದ್ಯ ಪಂಜಾಬ್ ವಿರುದ್ಧ ದೇವದತ್ ಪಡಿಕ್ಕಲ್ ಯಾವ ರೀತಿ ಬ್ಯಾಟ್ ಬೀಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲರ್ ಎರಡಲ್ಲೂ ಸ್ಥಿರ ಪ್ರದರ್ಶನ ತೋರಿದ ಆರ್ಸಿಬಿ, ಇಂದಿನ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಇತ್ತಂಡಗಳಿಗೂ ಬ್ಯಾಟಿಂಗ್ ಪ್ರಮುಖ ಬಲವಾಗಿದ್ದು, ಕೊಹ್ಲಿ, ಎಬಿಡಿ, ಫಿಂಚ್, ಪಡಿಕ್ಕಲ್ ಅವರಂತಹ ಆಟಗಾರರೊಂದಿಗೆ ಆರ್ಸಿಬಿ ಬಲವಾದ ಬ್ಯಾಟಿಂಗ್ ಲೈನ್ ಹೊಂದಿದೆ. ಚಹಲ್ ಯಾವುದೇ ಸಂದರ್ಭದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದು, ಸ್ಟೈನ್, ಸೈನಿ ಯಶಸ್ಸು ಕಾಣಬೇಕಿದೆ. ಇತ್ತ ಪಂಜಾಬ್ ತಂಡ ಕೂಡ ರಾಹುಲ್, ಮಯಾಂಕ್, ನಾಯರ್, ಪೂರನ್, ಮ್ಯಾಕ್ಸ್ ವೆಲ್ ರಂತಹ ಆಟಗಾರರೊಂದಿಗೆ ಉತ್ತಮ ಬ್ಯಾಟಿಂಗ್ ಲೈನಪ್ ಹೊಂದಿದೆ. ವೇಗಿ ಶಮಿ, ಯುವ ಆಟಗಾರ ರವಿ ಬಿಷ್ನೋಯಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಉಳಿದಂತೆ ದುಬೈನಲ್ಲಿ ನಡೆದ ಕಳೆದ 2 ಪಂದ್ಯಗಳನ್ನು ಗಮನಿಸದರೆ ಪಿಚ್ ಸ್ಪರ್ಧಾತ್ಮಕವಾಗಿದ್ದು, ಸ್ಪಿನ್ನರ್ ಗಳಿಗೆ ಹೆಚ್ಚಿನ ಲಾಭ ಸಿಕ್ಕಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ.
.@anilkumble1074 on the upcoming ‘royal challenge’ and more ????#CoachDiSoch #SaddaPunjab #WakhraSquad #IPL2020 #KXIPvRCB pic.twitter.com/TqdAXFCAqK
— Kings XI Punjab (@lionsdenkxip) September 24, 2020
ಸಂಭಾವ್ಯ ತಂಡ:
ಬೆಂಗಳೂರು: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಶಿವಂ ದುಬೆ, ಜೋಶ್ವಾ ಫಿಲಿಪಿ, ವಾಷಿಂಗ್ಟನ್ ಸುಂದರ್, ಸೈನಿ, ಉಮೇಶ್ ಯಾದವ್, ಸೈನ್, ಚಹಲ್.
ಪಂಜಾಬ್: ಕೆಎಲ್ ರಾಹುಲ್ (ನಾಯಕ), ಮಯಾಂಕ್, ಕರುಣ್ ನಾಯರ್, ಪೂರನ್, ಮ್ಯಾಕ್ಸ್ ವೆಲ್, ಸರ್ಫರಾಜ್ ಖಾನ್, ಕೆ.ಗೌತಮ್, ಕ್ರಿಸ್ ಜೋರ್ಡನ್, ಶಮಿ, ಶೆಲ್ಡನ್ ಕಾರ್ಟೆಲ್, ರವಿ ಬಿಷ್ನೋಯಿ.
Quite a few familiar faces at KXIP, but our stars were determined to leave no stone unturned heading into our second match of #Dream11IPL#PlayBold #WeAreChallengers pic.twitter.com/bEK7ewALMW
— Royal Challengers Bangalore (@RCBTweets) September 24, 2020