– ಮಾರ್ಗಸೂಚಿಯಲ್ಲಿ ಏನಿದೆ..?
ಬೆಂಗಳೂರು: ಕಂಟೈನ್ಮೆಂಟ್ ಝೋನ್ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್ಗಳನ್ನು ಓಪನ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಕೊರೊನಾ ಭೀತಿಯಿಂದ ಕಳೆದ ಮೂರು ತಿಂಗಳಿಂದ ಶಾಪಿಂಗ್ ಮಾಲ್ಗಳನ್ನು ಕ್ಲೋಸ್ ಮಾಡಲಾಗಿದೆ. ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದರೂ ಕೆಲ ಸಡಿಲಿಕೆಗಳನ್ನು ಮಾಡಲಾಗುತ್ತಿದೆ. ಇದರ ನಡುವೆ ಈಗ ಕಂಟೈನ್ಮೆಂಟ್ ಝೋನ್ಗಳಲ್ಲದೇ ಇರುವಂತಹ ಪ್ರದೇಶಗಳಲ್ಲಿನ ಶಾಪಿಂಗ್ ಮಾಲ್ಗಳನ್ನು ಓಪನ್ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.
Advertisement
Advertisement
ಈ ಹಿಂದೆಯೇ ಜೂನ್ 8ರಿಂದ ಮಾಲ್ಗಳನ್ನು ಓಪನ್ ಮಾಡಲಾಗುವುದು ಎಂದು ಹೇಳಲಾಗಿತ್ತು. ಅಂತೆಯೇ ಸರ್ಕಾರ ಈ ತೀರ್ಮಾನ ಮಾಡಿದ್ದು, 65 ವರ್ಷದೊಳಗಿನ ವೃದ್ಧರು ಹಾಗೂ 10 ವರ್ಷದೊಳಗಿನ ಮಕ್ಕಳು ಮಾಲ್ಗಳಿಗೆ ಪ್ರವೇಶಿಸುವಂತಿಲ್ಲ. ಜೊತೆಗೆ ಪ್ರತಿಯೊಬ್ಬರೂ ಕೂಡ 6 ಅಡಿಯಷ್ಟು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಬೇಕು ಎಂಬ ಷರತ್ತು ವಿಧಿಸಿದೆ.
Advertisement
ಮಾಲ್ಗಳಿಗೆ ಮಾರ್ಗಸೂಚಿ
ಮಾಲ್ ಪ್ರವೇಶಿಸುವ ಅಂಗಡಿಗಳ ನೌಕರರು, ಮಾಲ್ ಕೆಲಸಗಾರರು, ಗ್ರಾಹಕರು, ಸಿಬ್ಬಂದಿಗೆ ಫೇಸ್ ಮಾಸ್ಕ್ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ನಿಯಮ ಪಾಲಿಸಲು ಸಿಬ್ಬಂದಿ ನೇಮಿಸಬೇಕು. ವೃದ್ಧ ನೌಕಕರು, ಗರ್ಭಿಣಿ ಕೆಲಸಗಾರು ಕೆಲಸಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಜೊತೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ಪಾರ್ಕಿಂಗ್ ಮತ್ತು ಮಾಲ್ ಆವರಣದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ನಿಭಾಯಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿಲಾಗಿದೆ.
Advertisement
ಪಾರ್ಕಿಂಗ್ ಸಿಬ್ಬಂದಿಗೆ ಮಾಸ್ಕ್, ಗ್ಲವ್ಸ್ ಬಳಕೆ ಕಡ್ಡಾಯವಾಗಿರಬೇಕು. ಮಾಲ್ ಒಳಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಸೀಮಿತ ಜನರ ಪ್ರವೇಶಕ್ಕೆ ಆದ್ಯತೆ ನೀಡಬಹುದು. ಎಸ್ಕಲೇಟರ್ನಲ್ಲಿ ಒಂದು ಮೆಟ್ಟಿಲು ನಡುವೆ ಅಂತರ ಕಾಪಾಡಿಕೊಳ್ಳಬೇಕು. ಎಸಿ ಅವಶ್ಯಕ ಇದ್ದರೆ 24-30 ಡಿಗ್ರಿ ಬಳಕೆ ಮಾಡಬಹುದು, ಇಲ್ಲದಿದ್ದರೆ ನೈಸರ್ಗಿಕ ಗಾಳಿಗೆ ಒತ್ತು ನೀಡಬೇಕು. ದೊಡ್ಡ ಪ್ರಮಾಣ ಜನ ಸೇರಿ ಪಾರ್ಟಿ ಸಭೆ ಮಾಡುವಂತಿಲ್ಲ. ಮಾಲ್ನಲ್ಲಿ ಬಳಕೆಯಾದ ಎಲ್ಲ ವಸ್ತುಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.
ಶೌಚಾಲಯಗಳನ್ನು ಆಗ್ಗಾಗ್ಗೆ ಸ್ವಚ್ಛ ಮಾಡಬೇಕು. ಫುಡ್ ಕೋರ್ಟ್ ನಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮಾಲ್ನಲ್ಲಿರಿವ ರೆಸ್ಟೋರೆಂಟ್ ನಲ್ಲಿ ಶೇ.50 ಸಾರ್ಮಥ್ಯಕ್ಕೆ ಅವಕಾಶ ನೀಡಬೇಕು. ಜೊತೆಗೆ ಕೂರುವಾಗ ಅಂತರವಿರಬೇಕು. ಪ್ರತಿ ಗ್ರಾಹಕರು ಬದಲಾದ ಮೇಲೆ ಟೇಬಲ್ ಸ್ಯಾನಿಟೈಜ್ ಮಾಡಬೇಕು. ಕಿಚನ್ನಲ್ಲೂ ಅಂತರ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಮಾಲ್ನಲ್ಲಿರುವ ಗೇಮಿಂಗ್ ಸೆಂಟರ್, ಮಕ್ಕಳ ಆಟದ ಪ್ರದೇಶ, ಸಿನಿಮಾ ಮಂದಿರ ಬಂದ್ ಆಗಬೇಕು. ಒಂದು ವೇಳೆ ಮಾಲ್ನಲ್ಲಿ ಸೋಂಕು ಪತ್ತೆಯಾದರೆ ಸೋಂಕಿತ ಓಡಾಡಿದ ಪ್ರದೇಶ ಐಸೋಲೇಟ್ ಮಾಡಬೇಕು. ಜೊತೆಗೆ ಹತ್ತಿರದ ಆರೋಗ್ಯ ಇಲಾಖೆ ಮಾಹಿತಿ ನೀಡಬೇಕು ಎಂದು ಮಾರ್ಗ ಸೂಚಿಯಲ್ಲಿ ವಿವರಿಸಲಾಗಿದೆ.