ಕಾರವಾರ: ಮದ್ಯದ ಅಮಲಿನಲ್ಲಿ ಔಷಧ ಎಂದು ತಿಳಿದುಕೊಂಡು ಬ್ರೇಕ್ ಆಯಿಲ್ ಸೇವಿಸಿ ವಿದ್ಯುತ್ ಇಲಾಖೆ (ಹೆಸ್ಕಾಂ) ಇಂಜಿನಿಯರ್ ಮೃತಪಟ್ಟ ಘಟನೆ ಶಿರಸಿಯ ಕೆಇಬಿ ವಸತಿ ನಿಲಯದಲ್ಲಿ ನಡೆದಿದೆ.
Advertisement
ಶಿರಸಿಯ ಕೆಇಬಿಯಲ್ಲಿ ಕಿರಿಯ ಇಂಜಿನಿಯರ್ ಆಗಿದ್ದ ಸುರೇಶ ಗುತ್ಯಪ್ಪ ಅರಳೇಶ್ವರ (51) ಮೃತಪಟ್ಟ ವ್ಯಕ್ತಿ. ಇವರು ಪಾಶ್ರ್ವ ವಾಯು ಕಾಯಿಲೆಯಿಂದ ಚೇತರಿಸಿಕೊಂಡು ಬಿಪಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಮೃತರ ಎರಡನೇ ಮಗ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ವಿಪರೀತವಾಗಿ ಕುಡಿಯಲು ಆರಂಭಿಸಿದ್ದರು.
Advertisement
Advertisement
ಹೀಗೆ ನಿತ್ಯ ಕುಡಿದು ಮನೆಗೆ ಬರುತ್ತಿದ್ದರು. ಬುಧವಾರ ರಾತ್ರಿ ಮದ್ಯ ಕುಡಿದು ಊಟ ಮಾಡಿದ ನಂತರ ಔಷಧವೆಂದು ಬ್ರೇಕ್ ಆಯಿಲ್ ಸೇವಿಸಿದ್ದಾರೆ. ಬಳಿಕ ಮೃತಪಟ್ಟಿದ್ದಾರೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.