– ಆರೋಪಿ ಮನವೊಲಿಸಲು ಪೊಲೀಸರ ಹರಸಾಹಸ
ಜೈಪುರ: ಹುಡುಗಿ ಪ್ರೀತಿಗೆ ಒಪ್ಪದ್ದಕ್ಕೆ ಅವರ ಮನೆ ಮುಂದೆ ಕಂಟ್ರಿ ಮೇಡ್ ಗನ್ ಹಿಡಿದು, ಶರ್ಟ್ ಬಿಚ್ಚಿ ಭಗ್ನ ಪ್ರೇಮಿ ವಿಕೃತಿ ಮೆರೆದಿದ್ದು, ಪೊಲೀಸರು ಸಮಾಧಾನಪಡಿಸಲು ಹರಸಾಹಸಪಟ್ಟಿದ್ದಾರೆ.
ರಾಜಸ್ಥಾನದ ಧೋಲ್ಪುರದಲ್ಲಿ ಘಟನೆ ನಡೆದಿದ್ದು, ಹುಡುಗಿಯ ಮನೆ ಮುಂದೆ ಹೈ ಡ್ರಾಮಾ ನಡೆಸಿದ ಯುವಕನನ್ನು ಸಮಾಧಾನ ಪಡಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಆಕಾಶ್ ಗುರ್ಜಾರ್ ಎಂದು ಗುರುತಿಸಲಾಗಿದ್ದು, ಮನೆಯ ಬಳಿ ವಿಕೃತವಾಗಿ ವರ್ತಿಸುತ್ತಿರುವುದಕ್ಕೆ ಹುಡುಗಿಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದ್ದು, ಅವರ ಮುಂದೆಯೇ ಭಗ್ನ ಪ್ರೇಮಿ ಗನ್ ಹಿಡಿದು, ಶರ್ಟ್ ಬಿಚ್ಚಿ ವಿಕೃತವಾಗಿ ವರ್ತಿಸಿದ್ದಾನೆ. ಈ ಪೂರ್ತಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ಆರೋಪಿ ಪಿಸ್ತೂಲ್ ತೋರಿಸಿ, ತನ್ನನ್ನು ಶೂಟ್ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಸಂಬಂಧಿಯೊಂದಿಗೆ ವಿವಾಹ ನಿಶ್ಚಯಿಸಿದ್ದಕ್ಕೆ ಆರೋಪಿ ಇತ್ತೀಚೆಗೆ ಹುಡುಗಿಯನ್ನು ಕಿಡ್ನ್ಯಾಪ್ ಸಹ ಮಾಡಿದ್ದ. ಆದರೆ ಹುಡುಗಿ ಆರೋಪಿಯನ್ನು ಪ್ರೀತಿಸುತ್ತಿರಲಿಲ್ಲ. ಒನ್ ಸೈಡ್ ಲವ್ನಿಂದಾಗಿ ವ್ಯಕ್ತಿ ಈ ರೀತಿ ವರ್ತಿಸಿದ್ದಾನೆ.
Advertisement
ತನ್ನ ಕನಸಿನ ರಾಣಿಯನ್ನು ಪಡೆಯಲೇಬೇಕು ಎಂಬ ಉದ್ದೇಶದಿಂದ ಆರೋಪಿ ಪಿಸ್ತೂಲ್ ತೋರಿಸಿ, ತನ್ನನ್ನು ತಾನೇ ಶೂಟ್ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾನೆ. ಕೊನೆಗೆ ಹರಸಾಹಸಪಟ್ಟು, ನಿಹಲ್ಗಂಜ್ ಥಾನಾದ ಪೊಲೀಸರು ಆರೋಪಿಯನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಎರಡು ದಿನಗಳ ಹಿಂದೆ ಆಕಾಶ್ ಗುರ್ಜಾರ್ ಎಂಬ ವ್ಯಕ್ತಿಯಿಂದ ಕರೆ ಬಂತು. ಬಳಿಕ ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ. ನಾವು ಆ ಪ್ರದೇಶದ ಮೇಲೆ ದಾಳಿ ನಡೆಸಿದೆವು. ಆಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಇಂದು ಸಹ ಅದೇ ವ್ಯಕ್ತಿಯಿಂದ ಕರೆ ಬಂತು. ನಾನು ಪಿಸ್ತೂಲ್ ಹಿಡಿದು ಮನೆ ಹೊರಗಡೆ ಇದ್ದೇನೆ, ನಿಮ್ಮ ಮಗಳನ್ನು ನನ್ನ ಜೊತೆ ಕಳುಹಿಸದಿದ್ದರೆ ನಿಮ್ಮ ಮೇಲೆ ಗುಂಡು ಹಾರಿಸುತ್ತೇನೆ ಎಂದು ಬೆದರಿಕೆ ಹಾಕಿದ ಎಂದು ಹುಡುಗಿ ತಂದೆ ವಿವರಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ತಂಡ ರಚಿಸಿ, ಸ್ಥಳಕ್ಕೆ ಭೇಟಿ ನೀಡಿದೆವು. ನಾವು ಸ್ಥಳಕ್ಕೆ ತೆರಳುತ್ತಿದ್ದಂತೆ ಆರೋಪಿ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಅಲ್ಲದೆ ಇತರರನ್ನು ಸಹ ಬೆದರಿಸಿದ ಎಂದು ಧೋಲ್ಪೂರ್ ಎಸ್ಪಿ ಕೇಸರ್ ಸಿಂಗ್ ಮಾಹಿತಿ ನೀಡಿದ್ದಾರೆ.