ದುಬೈ: ಭಾರತೀಯ ರೆಸ್ಟೋರೆಂಟ್ನಲ್ಲಿ ತಯಾರಾದ ಬಿರಿಯಾನಿಗೆ ಬರೋಬ್ಬರಿ 20 ಸಾವಿರ ರೂಪಾಯಿ ಬೆಲೆ ನಿಗದಿಯಾಗುವ ಮೂಲಕ ಸುದ್ದಿಯಾಗಿದೆ.
Advertisement
ಬಿರಿಯಾನಿ ಹಲವಾರು ದೇಶಗಳಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾಗಿದೆ ಮತ್ತು ಬಿರಿಯಾನಿ ಪ್ರಿಯರು ಸಾಮಾನ್ಯವಾಗಿ ಕೇಸರಿ-ರುಚಿಯ ಅಕ್ಕಿ ಖಾದ್ಯಗಳಿರುವು ವಿಶೇಷವಾಗಿದೆ. ಆದರೆ ದುಬೈನ ರಾಯಲ್ ಗೋಲ್ಡ್ನಲ್ಲಿ ಸಿಗುವ ಬಿರಿಯಾನಿ ವಿಶೇಷ ಮತ್ತು ಕೊಂಚ ವಿಭಿನ್ನವಾಗಿದೆ. ಬೆಲೆ ಬಿರಿಯಾನಿ ಪ್ರಿಯರಿಗೆ ಆಶ್ಚರ್ಯವನ್ನುಂಟು ಮಾಡಿದೆ.
Advertisement
Advertisement
ರಾಯಲ್ ಗೋಲ್ಡ್ ಬಿರಿಯಾನಿ ಆರ್ಡ್ರ್ ಮಾಡಿದರೆ ಅದನ್ನು ತಂದುಕೊಡುವುದಕ್ಕೆ 45 ನಿಮಿಷ ತೆಗೆದುಕೊಳ್ಳುತ್ತದೆ. ನೀವು ಒಂದು ಪ್ಲೇಟ್ ಬಿರಿಯಾನಿಗಾಗಿ ಬರೋಬ್ಬರಿ 20 ಸಾವಿರವನ್ನು ನೀಡಬೇಕಾಗುತ್ತದೆ. ಈ ಬಿರಿಯಾನಿಗೆ ಮೂರು ರೀತಿಯ ಅಕ್ಕಿಯನ್ನು ಹಾಕಿ ತಯಾರಿಸಲಾಗುತ್ತದೆ. ಚಿಕನ್ ಬಿರಿಯಾನಿ ರೈಸ್, ಕೀಮಾ ರೈಸ್ ಮತ್ತು ವೈಟ್ ಕೇಸರಿಯಿಂದ ತಯಾರಿಸಲಾಗುತ್ತದೆ.
Advertisement
View this post on Instagram
ಬಿಯಾರಿಯಾನಿ ಜೊತೆಯಲ್ಲಿ ತಟ್ಟೆಯಲ್ಲಿ 3 ಬಗೆಯ ಚಿಕನ್ ಗ್ರಿಲ್, ಮಲೈ ಚಿಕನ್, ರಜಪೂತಾನ ಮುರ್ಗ್ ಸುಲಾ ಮತ್ತು ಚಿಕನ್ ಮೀಟ್ಬಾಲ್, ಬೇಯಿಸಿದ ಬೇಬಿ ಆಲೂ ಹಾಗೂ ಮೊಟ್ಟೆ ಬಿರಿಯಾನಿ ಜೊತೆಯಲ್ಲಿ ತಟ್ಟೆಯಲ್ಲಿರುತ್ತದೆ.
ಲ್ಯಾಂಚ್ ಚಾಪ್ಸ್ ಮತ್ತು ಲ್ಯಾಂಬ್ ಸೀಖ್ ಕಬಾಬ್, ಪುದೀನ, ಹುರಿದ ಗೋಡಂಬಿ, ದಾಳಿಂಬೆ ಮತ್ತು ಹುರಿದ ಈರುಳ್ಳಿಂದ ತಟ್ಟೆಯನ್ನು ಆಲಂಕರಿಸಿರುತ್ತಾರೆ. ನಿಹಾರಿ ಸಲಾನ್, ಜೋದ್ಪುರ್ ಸಲಾನ್, ಬಾದಾಮಿ ಸಾಸ್, ದಾಳಿಂಬೆ ರೈತಾ ಬಿರಿಯಾನಿಯೊಂದಿಗೆ ಸಿಗುತ್ತದೆ.