– ನಿಶ್ಚಯವಾಗಿದ್ದ ಹುಡುಗನನ್ನೇ ವರಿಸಿದ 20ರ ವಧು
– ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಜೋಡಿ
ಲಕ್ನೋ: 20 ವರ್ಷದ ಯುವತಿಯೊಬ್ಬಳು ಬರೋಬ್ಬರಿ 80 ಕಿಲೋಮೀಟರ್ ದೂರ ಏಕಾಂಗಿಯಾಗಿ ನಡೆದುಕೊಂಡು ಹೋಗಿ ನಿಶ್ಚಯವಾಗಿದ್ದ ಹುಡುಗನ ಜೊತೆಯೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಧು ಗೋಲ್ಡಿ (20) ಮತ್ತು ವೀರೇಂದ್ರ ಕುಮಾರ್ (23) ಸರಳವಾಗಿ ಮದುವೆಯಾದ ಜೋಡಿ. ವಧು ಗೋಲ್ಡಿ ಕಾನ್ಪುರದಿಂದ ಸುಮಾರು 80 ಕಿಲೋಮೀಟರ್ ದೂರದವರೆಗೂ ಒಬ್ಬಳೇ ನಡೆದುಕೊಂಡು ಕನೋಜ್ ನಲ್ಲಿರುವ ವೀರೇಂದ್ರ ಕುಮಾರ್ ಮನೆಗೆ ಹೋಗಿದ್ದಾಳೆ. ನಂತರ ಹುಡುಗನ ಕುಟುಂಬದವರ ಸರಳವಾಗಿ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.
Advertisement
Advertisement
ಈ ಜೋಡಿಯ ಮದುವೆ ಮೇ 4 ರಂದು ನಿಗದಿಯಾಗಿತ್ತು. ಆದರೆ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಚ್ನಲ್ಲಿ ಲಾಕ್ಡೌನ್ ಜಾರಿ ಮಾಡಿತ್ತು. ಅಂದಿನಿಂದ ಎಲ್ಲಾ ಸಾರಿಗೆ ಸೇವೆಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಕೊರೊನಾ ಲಾಕ್ಡೌನ್ ಕಾರಣ ಅವರ ವಿವಾಹವನ್ನು ಕುಟುಂಬವರು ಮುಂದೂಡಿದ್ದರು. ಗೋಲ್ಡಿ ಮತ್ತು ವೀರೇಂದ್ರ ಕುಮಾರ್ ಪ್ರತಿದಿನ ಫೋನ್ನಲ್ಲಿ ಮಾತನಾಡುತ್ತಿದ್ದರು. ಆದರೆ ಗೋಲ್ಡಿ ಪೋಷಕರು ಎರಡನೇ ಬಾರಿಯೂ ಅವರ ಮದುವೆಯನ್ನು ಮುಂದೂಡಿದ್ದಾರೆ. ಇದರಿಂದ ವಧು-ವರ ಇಬ್ಬರೂ ಬೇಸರಗೊಂಡಿದ್ದರು.
Advertisement
Advertisement
ವಧು ಗೋಲ್ಡಿ ಕಾನ್ಪುರದ ಲಕ್ಷ್ಮಣಪುರ ತಿಲಕ್ ಗ್ರಾಮ ನಿವಾಸಿಯಾಗಿದ್ದು, ವರ ಲಕ್ನೋದಿಂದ 120 ಕಿ.ಮೀ ದೂರದಲ್ಲಿರುವ ಕನೋಜ್ ನ ಗ್ರಾಮದಲ್ಲಿದ್ದನು. ಹೀಗಾಗಿ ತನ್ನ ಗ್ರಾಮದಿಂದ ವೀರೇಂದ್ರ ಮನೆಗೆ ಏಕಾಂಗಿಯಾಗಿ ನಡೆದುಕೊಂಡು ಹೋಗಿದ್ದಾಳೆ. ಅಲ್ಲಿ ವರ ವೀರೇಂದ್ರ ಅವರ ಕುಟುಂಬವು ಹಳೆಯ ದೇವಾಲಯದಲ್ಲಿ ಇಬ್ಬರಿಗೂ ವಿವಾಹವನ್ನು ಸರಳವಾಗಿ ಮಾಡಿದ್ದಾರೆ.
ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಧರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.