ಬೆಂಗಳೂರು: ಕೋವಿಡ್ 19 ಮಧ್ಯೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆ ಬರೆದ ಒಟ್ಟು 8,11,050 ವಿದ್ಯಾರ್ಥಿಗಳ ಪೈಕಿ 5,82,316 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.71.80 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ.73.70 ಫಲಿತಾಂಶ ದಾಖಲಾಗಿತ್ತು.
ಮಧ್ಯಾಹ್ನ ಮೂರು ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರವನ್ನು ಪ್ರಕಟಿಸಿದರು. ಈ ಬಾರಿ 2,24,734 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.
Advertisement
Advertisement
ಎಂದಿನಂತೆ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ. 77.74 ಬಾಲಕಿಯರು ತೇರ್ಗಡೆಯಾಗಿದ್ದರೆ, ಶೇ. 66.41 ಬಾಲಕರು ತೇರ್ಗಡೆಯಾಗಿದ್ದಾರೆ. 223 ಮೌಲ್ಯಮಾಪನ ಕೇಂದ್ರದಲ್ಲಿ 52,219 ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ.
Advertisement
Advertisement
19,086 ಮಂದಿ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯದಿದ್ದರೆ, 8,067 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ. ಕಳೆದ ಬಾರಿ 625ಕ್ಕೆ 625 ಅಂಕವನ್ನು ಇಬ್ಬರು ಪಡೆದಿದ್ದರೆ ಈ ಬಾರಿ 6 ಮಂದಿ 625 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳು www.kseeb.kar.nic.in ಮತ್ತು www.karresults.nic.in ವೆಬ್ಸೈಟ್ಗಳಲ್ಲಿ ಫಲಿತಾಂಶವನ್ನು ನೋಡಬಹುದು.