ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100ರ ಗಡಿಯತ್ತ ಬರುತ್ತಿರುವ ನಡುವೆ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಬಿಸಿಯೂ ತಟ್ಟಿದೆ. ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದೆ.
ಎಲ್ಪಿಜಿ ಸಿಲಿಂಡರ್ ದರ ಭಾನುವಾರ ಬೆಂಗಳೂರಿನಲ್ಲಿ 722 ರೂ. ಇತ್ತು. ಈಗ ಇದು 772 ರೂ.ಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ನಿಂದ ಈಚೆಗೆ ಸಿಲಿಂಡರ್ ದರದಲ್ಲಿ ಮೂರು ಬಾರಿ ಹೆಚ್ಚಳ ಮಾಡಲಾಗಿದೆ. ಫೆ.4 ರಂದು 25 ರೂ. ಏರಿಕೆ ಕಂಡಿತ್ತು.
Advertisement
Advertisement
ಸರ್ಕಾರ ಪ್ರತಿ ವರ್ಷ 14.2 ಕೆಜಿ ತೂಕದ 12 ಸಿಲಿಂಡರ್ಗಳನ್ನುಉಚಿತವಾಗಿ ನೀಡುತ್ತಿದೆ. ಕೋವಿಡ್ 19 ಕಾರಣದಿಂದ ಆದಾಯ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಪೂರ್ಣ ಹೊರೆಯನ್ನು ಗ್ರಾಹಕರೇ ಭರಿಸಬೇಕಾಗಿದೆ.
Advertisement
ಎಲ್ಪಿಜಿ ಸಿಲಿಂಡರ್ ದರವನ್ನು ತೈಲ ಕಂಪನಿಗಳು ಪರಿಷ್ಕರಿಸುತ್ತಿರುತ್ತವೆ. ಅಂತರರಾಷ್ಟ್ರೀಯ ಇಂಧನ ದರಗಳು ಮತ್ತು ಅಮೆರಿಕ ಡಾಲರ್-ರೂಪಾಯಿ ವಿನಿಮಯ ದರಗಳನ್ನು ಅವಲಂಬಿಸಿ, ಬೆಲೆಗಳು ಹೆಚ್ಚಾಗುತ್ತದೆ ಮತ್ತು ಇಳಿಕೆಯಾಗುತ್ತದೆ.
Advertisement
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಿಲಿಂಡರ್ ದರ ಏರಿಕೆ ಆಗುತ್ತಿದೆ.
ಎಲ್ಲಿ ಎಷ್ಟು ದರ?
ದೆಹಲಿ 769 ರೂ., ಕೋಲ್ಕತ್ತಾ 795, ಮುಂಬೈ 769 ರೂ., ಚೆನ್ನೈ 785 ರೂ. ದರಕ್ಕೆ ಏರಿಕೆಯಾಗಿದೆ.