ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನಾನು ರಾಜೀನಾಮೆಗೆ ಸಿದ್ಧ ಎಂಬುದನ್ನು ಪರೋಕ್ಷವಾಗಿ ಮೊದಲ ಬಾರಿಗೆ ಬಹಿರಂಗವಾಗಿಯೇ ತಿಳಿಸಿದ್ದಾರೆ.
ಮಾಜಿ ಸಿಎಂ ಡಿ.ದೇವರಾಜು ಅರಸು ಅವರ 39ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಅರಸು ಅವರ ಪ್ರತಿಮೆಗೆ ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಕಮಲ ಕ್ರಾಂತಿಯ ಮುನ್ಸೂಚನೆ ನೀಡಿದೆಯಾ ಬಿಜೆಪಿ ಹೈಕಮಾಂಡ್?
Advertisement
Advertisement
ಈ ವೇಳೆ ಕರ್ನಾಟಕದಲ್ಲಿ ನಿಮ್ಮ ಹಾಗೇ ಸಕ್ರಿಯವಾಗಿ ತೊಡಗಿಸಿಕೊಂಡ ನಾಯಕರು ಬಿಜೆಪಿಯಲ್ಲಿ ಯಾರೂ ಇಲ್ಲ. ಪರ್ಯಾಯ ನಾಯಕರು ಘೋಷಣೆಯಾಗದೇ ಇರುವ ಸಂದರ್ಭದಲ್ಲಿ ಯೋಗೇಶ್ವರ್, ಅರವಿಂದ್ ಬೆಲ್ಲದ್ ಅವರು ಬಿಜೆಪಿ ನಾಯಕತ್ವದ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದನ್ನೂ ಓದಿ: ಸಿಎಂ ಬಿಎಸ್ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?
Advertisement
ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಿಜೆಪಿಗೆ ಪರ್ಯಾಯದ ವ್ಯಕ್ತಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ದೇಶದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿಗಳು ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ ಎಂದು ಉತ್ತರಿಸಿದರು.