ಮಂಡ್ಯ: ಎಟಿಎಂನಲ್ಲಿ ದರೋಡೆಗೆ ಯತ್ನದ ವೇಳೆ ಕೊಠಡಿಯಲ್ಲಿದ್ದ ಸೈರನ್ ಮೊಳಗಿದ ಪರಿಣಾಮ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಕಳೆದ ರಾತ್ರಿ ನಡೆದಿದೆ.
Advertisement
ಬಸ್ ನಿಲ್ದಾಣದಲ್ಲಿರುವ ಆಕ್ಸಿಸ್ ಬ್ಯಾಂಕ್ನ ಎಟಿಎಂನಲ್ಲಿ ದರೋಡೆ ಮಾಡಲು ದುಷ್ಕರ್ಮಿಗಳು ಕಳೆದ ಮಧ್ಯರಾತ್ರಿ ಬಂದಿದ್ದಾರೆ. ಎಟಿಎಂ ಬಳಿ ಸೆಕ್ಯೂರಿಟಿ ಇಲ್ಲದ ಕಾರಣ ನೇರವಾಗಿ ಎಟಿಎಂ ಒಳಗಡೆಗೆ ನುಗ್ಗಿದ್ದಾರೆ. ನಂತರ ಎಟಿಎಂ ಯಂತ್ರದಲ್ಲಿ ಹಣ ಬರುವ ಸ್ಥಳವನ್ನು ಕೊರೆಯಲು ಮುಂದಾಗಿದ್ದಾರೆ.
Advertisement
Advertisement
Advertisement
ಈ ವೇಳೆ ಕೊರೆಯಲು ಸಾಧ್ಯವಾಗದ ಕಾರಣ ಮಷಿನ್ನನ್ನು ಒಡೆಯಲು ಮುಂದಾಗಿದ್ದಾರೆ. ಮಷಿನ್ಗೆ ಜೋರಾಗಿ ಒಡೆದ ಕಾರಣ ಎಟಿಎಂ ಕೊಠಡಿಯಲ್ಲಿ ಇದ್ದ ಸೈರನ್ ಕೂಗಿಕೊಂಡಿದೆ. ಇದರಿಂದ ಗಾಬರಿಗೊಂಡ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.