ಚೆನ್ನೈ: ದಂಪತಿ ಬಟ್ಟೆ ಮಾಸ್ಕ್ಗಳನ್ನು ಹೊಲಿದು ಅವುಗಳನ್ನು ಉಚಿತವಾಗಿ ಚೆನ್ನೈನಲ್ಲಿ ಹಂಚುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಂದಿರಾ ಮತ್ತು ಕರುಣಕರನ್ ಇಬ್ಬರು ಸಾಮಾಜಿಕ ಕಳಕಳಿಯಿಂದ ಉತ್ತಮ ಕೆಲಸಕ್ಕೆ ಮುಂದಾಗಿದ್ದಾರೆ. ಚಂದಿರಾ ಬಟ್ಟೆಹೊಲೆಯುವ ಕಂಪನಿಯನ್ನು ಕೆಲಸಮಾಡುತ್ತರೆ. ತನ್ನ ಖಾಲಿ ಸಮಯದಲ್ಲಿ ಅಲ್ಲಿ ಉಪಯೋಗಿಸಿ ಬಿದ್ದಿರುವ ಸಣ್ಣ ಸಣ್ಣ ಬಟ್ಟೆ ತುಂಡುಗಳನ್ನು ಬಳಸಿ ಮಾಸ್ಕ್ ಹೊಲಿಯಲು ಪ್ರಾರಂಭಿಸಿದೆ. ನನ್ನ ಸ್ವಂತ ಹಣದಿಂದ ಇಲಾಸ್ಟಿಕ್ ಖರೀದಿಸುತ್ತೇನೆ.
Advertisement
Advertisement
ಮಾಸ್ಕ್ ಹೊಲಿಯಲು ಪ್ರಾರಂಭಿಸಿದ ಮೇಲೆ ಮೊದಲಿಗೆ ನನ್ನ ಕುಟುಂಬ ಹಾಗೂ ನೆರೆ ಹೊರೆಯವರಿಗೆ ಕೊಟ್ಟಿದ್ದೇನು. ಮಾಸ್ಕ್ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತ್ತು. ಆಗ ನಾನು ನನ್ನ ಪತಿ ಸಹಾಯವನ್ನು ಪಡೆದುಕೊಂಡೆ. ನನ್ನ ಪತಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಆಗ ನನ್ನ ಮಾಸ್ಕ್ಗಳು ಅವರ ಮೂಲಕವಾಗಿ ಹೆಚ್ಚು ಜನರನ್ನು ತಲುಪಿದವು.
Advertisement
Advertisement
ನಾನು ಮಾಸ್ಕ್ ತಯಾರಿಸಲು ಆರಿಸಿಕೊಳ್ಳುವ ಬಟ್ಟೆ ಮೆಟೀರಿಯಲ್ 100 ರಷ್ಟು ಹತ್ತಿಯದ್ದಾಗಿದೆ. ಪಾಲಿಸ್ಟರ್ ನಂತಹ ಬಟ್ಟೆಗಳು ಉಸಿರಾಡಲು ಕಷ್ಟವಾಗುತ್ತದೆ. ಅನೇಕರು ನನ್ನನ್ನು ಸಂಪರ್ಕಿಸಿ ಮಾಸ್ಕ್ ಮಾಡಿಕೊಡಲು ಹೇಳಿದ್ದಾರೆ ಎಂದು ಚಂದಿರ ಹೇಳಿದ್ದಾರೆ.
ನಾವು ಸರಿಸುಮಾರು 500ಕ್ಕೂ ಹೆಚ್ಚು ಮಾಸ್ಕ್ಗಳನ್ನು ಇಲ್ಲಿಯವರೆಗೆ ಜನರಿಗೆ ನೀಡಿದ್ದೇವೆ. ಯಾರಾದರು ಮಾಸ್ಕ್ ಧರಿಸುವುದು ಮರೆತು ಬಂದರೆ ನನ್ನ ಪತ್ನಿ ಹೊಲೆದಿರುವ ಮಾಸ್ಕ್ ಎಂದು ಹೇಳಿ ಕೊಡುತ್ತೇನೆ ಎಂದು ಚಂದಿರಾ ಪತಿ ಹೇಳಿದ್ದಾರೆ.