– ಮತ್ತೆ ಜೈಲೇ ಗತಿನಾ ಅಥವಾ ರಿಲೀಸ್ ಆಗ್ತಾರಾ?
ಬೆಂಗಳೂರು: ನಟಿ ರಾಗಿಣಿ ಮತ್ತು ಸಂಜನಾ ಸಲ್ಲಿಸಿರುವ ಬೇಲ್ ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ ಎನ್ಡಿಪಿಎಸ್ ಕೋರ್ಟಿನಲ್ಲಿ ನಡೆಯಲಿದೆ.
Advertisement
ಸದ್ಯ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸೋಮವಾರ ರಾಗಿಣಿ ಮತ್ತು ಸಂಜನಾ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯ ಇಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿತ್ತು. ಪರಿಣಾಮ ನಟಿಯರು ಜೈಲಿನಲ್ಲೇ ಸಮಯ ಕಳೆದಿದ್ದರು.
Advertisement
ಈಗಾಗಲೇ ರಾಗಿಣಿ, ಸಂಜನಾ ಅವರ ಜಾಮೀನು ನಿರಾಕರಿಸಲಿ ಸಿಸಿಬಿ ಪೊಲೀಸರು ಪುಟಗಟ್ಟಲೇ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಸಿಸಿಬಿಯ ಪರ ವಕೀಲರು ಇಂದು ವಾದ ಮಂಡನೆ ಮಾಡಲಿದ್ದು, ನಟಿ ರಾಗಿಣಿಗೆ ಸಿಸಿಬಿ ಪರ ವಕೀಲ ವಾದ ಮುಳುವಾಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ.
Advertisement
Advertisement
ಸಿಸಿಬಿ ಆಕ್ಷೇಪಣೆ ಏನು?
ಈಗಾಗಲೇ ಸಾಕ್ಷ್ಯ ನಾಶದ ಆರೋಪ ಇದೆ. ಹೀಗಾಗಿ ಮತ್ತೆ ಸಾಕ್ಷ್ಯ ನಾಶ ಮಾಡ್ತಾರೆ. ಇವರಿಂದ ಮತ್ತಷ್ಟು ಆರೋಪಿಗಳು ಬಚವಾಗೋ ಸಾಧ್ಯತೆ ಇದೆ. ಕಳೆದ 5 ವರ್ಷಗಳಿಂದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ತನ್ನ ಇತರ ಮೆಂಬರ್ಸ್ ಜೊತೆ ಸೇರಿ ಪಾರ್ಟಿಗಳ ಆಯೋಜನೆ ಮಾಡಿದ್ದಾರೆ. ಪಾರ್ಟಿಗೆ ಬಂದವರಿಗೆ ಡ್ರಗ್ ಸಪ್ಲೆ ಮಾಡಿದ್ದಾರೆ. ಆಂಧ್ರ, ಗೋವಾ, ಪಂಜಾಬ್ ಮತ್ತು ಬಾಂಬೆ ಸೇರಿದಂತೆ ಕೆಲ ವಿದೇಶಿಗರಿಂದಲೂ ಡ್ರಗ್ಸ್ ತರಿಸಿಕೊಂಡಿದ್ದಾರೆ.
ಜಾಮೀನು ನೀಡಿದರೇ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿವೆ. ಪ್ರಕರಣದಲ್ಲಿ ರಾಗಿಣಿ ನೇರ ಪಾತ್ರವಿದ್ದು, ಪ್ರಭಾವಿಗಳಾಗಿರುವ ಕಾರಣ ಸಾಕ್ಷಿಗಳ ಮೇಲೆ ಒತ್ತಡ ಹಾಕುವ ಸಾಧ್ಯತೆ ಇದೆ. ಹಲವು ಡ್ರಗ್ ಪೆಡ್ಲರ್ ಗಳು ನಾಪತ್ತೆಯಾಗಿದ್ದಾರೆ. ಇವರು ಕ್ರಿಮಿನಲ್ ಆರೋಪದಲ್ಲಿ ಬಂಧಿತರಾಗಿದ್ದು, ಬೇಲ್ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ. ಆಕೆ ತಾನು ಡ್ರಗ್ ವಿರುದ್ಧ ಕ್ಯಾಂಪೇನ್ ಮಾಡುವ ಮೂಲಕ ಆಕೆಯ ಮತ್ತೊಂದು ಮುಖ ಬಚ್ಚಿಟ್ಟಿದ್ದಾರೆ. ಆರೋಪಿಯ ವಿರುದ್ಧ ಅನೇಕ ಡಿಜಿಟಲ್ ಸಾಕ್ಷಿಗಳು ಲಭ್ಯವಾಗಿದ್ದು, ಮೊಬೈಲ್ ಪಾಸ್ ವರ್ಡ್ ನೀಡದೇ ಕಿರಿಕಿರಿ ಮಾಡಿದ್ರು. ವಿಚಾರಣೆ ವೇಳೆ ತನಿಖೆ ಸಹಕರಿಸಿಲ್ಲ. ಬೇರೆ ಎಲ್ಲಾ ಆರೋಪಿಗಳು ಇವರ ಪಾತ್ರದ ಬಗ್ಗೆ ಹೇಳಿದ್ದಾರೆ ಎಂಬುದು ಆಕ್ಷೇಪಣೆಯ ಪ್ರಮುಖ ಅಂಶಗಳಾಗಿವೆ.