-ಮಂಡ್ಯದ 62 ಮಂದಿಗೆ ಮಹಾಮಾರಿ ಕೊರೊನಾ
ಬೆಂಗಳೂರು: ಇವತ್ತು ಒಂದೇ ದಿನ ರಾಜ್ಯದಲ್ಲಿ 127 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 1373ಕ್ಕೆ ಏರಿಕೆಯಾಗಿದೆ. ಬಹುತೇಕ ಸೋಂಕಿತರು ಮಹಾರಾಷ್ಟ್ರದ ಮುಂಬೈನಿಂದ ಬಂದವರಾಗಿದ್ದಾರೆ.
ಮಂಡ್ಯದಲ್ಲಿ ಮಾಹಾಮಾರಿ ರಣಕೇಕೆ ಹಾಕುತ್ತಿದ್ದು, ಇಂದು 62 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇಂದು ಕೊರೊನಾ ಮಾಹಾಮಾರಿಗೆ ಮೂವರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. 127ರಲ್ಲಿ 90 ಜನ ಮುಂಬೈನಿಂದ ಬಂದವರಾಗಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ಪ್ರಕಾರ, ಮಂಡ್ಯ 62, ಕಲಬುರಗಿ 11, ಉತ್ತರ ಕನ್ನಡ 4, ಚಿತ್ರದುರ್ಗ 1, ಗದಗ 1, ವಿಜಯಪುರ 1, ಬೆಂಗಳೂರು 6, ಚಿಕ್ಕಮಗಳೂರು 2, ಶಿವಮೊಗ್ಗ 12, ದಾವಣಗೆರೆ 19, ಉಡುಪಿ 4, ಹಾಸನ 3, ಯಾದಗಿರಿ 1 ಪ್ರಕರಣ ಬೆಳಕಿಗೆ ಬಂದಿದೆ.
Advertisement
ಇವತ್ತು ಒಂದೇ ದಿನ 127 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 1373ಕ್ಕೇರಿಕೆ #CoronaVirus #COVID19 #Karnataka @sriramulubjp @CMofKarnataka pic.twitter.com/lx4Fg2wink
— PublicTV (@publictvnews) May 19, 2020