ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದ್ದು, ಇಂದು 4,025 ಮಂದಿಗೆ ಸೋಂಕು ತಗುಲಿದೆ. 45 ಜನ ಸಾವನ್ನಪ್ಪಿದ್ದು, 7,661 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಒಟ್ಟು ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ. ಈ ಪೈಕಿ 64,480 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 7,41,219 ಮಂದಿ ಬಿಡುಗಡೆಯಾಗಿದ್ದಾರೆ. ಬುಧವಾರ ಕೇವಲ 3,146 ಜನರಿಗೆ ಸೋಂಕು ತಗುಲಿತ್ತು. ಇಂದು ಮತ್ತೆ ನಾಲ್ಕು ಸಾವಿರದ ಗಡಿಯನ್ನು ದಾಟಿದೆ.
Advertisement
Advertisement
ಒಟ್ಟು ಇಲ್ಲಿಯವರೆಗೆ 11,091 ಮಂದಿ ಮೃತಪಟ್ಟಿದ್ದು, ಸದ್ಯ 935 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 25,002 ಆಟಿಂಜನ್ ಟೆಸ್ಟ್, ಆರ್ಟಿಪಿಸಿಆರ್ ಮತ್ತು ಇತ್ಯಾದಿ 75,681 ಪರೀಕ್ಷೆ ಸೇರಿ ಒಟ್ಟು 1,00,683 ಕೋವಿಡ್ 19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 77,01,031 ಕೋವಿಡ್ 19 ಪರೀಕ್ಷೆ ಮಾಡಲಾಗಿದೆ.
Advertisement
ಎಂದಿನಂತೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 2,175 ಮೈಸೂರು 204, ತುಮಕೂರು 136, ಶಿವಮೊಗ್ಗ 127, ಮಂಡ್ಯ 115, ಹಾಸನ 114, ದಕ್ಷಿಣ ಕನ್ನಡದಲ್ಲಿ 96 ಮಂದಿಗೆ ಸೋಂಕು ಬಂದಿದೆ.
ಐಸಿಯುನಲ್ಲಿ ಒಟ್ಟು 935 ಮಂದಿ ಇದ್ದು, ಈ ಪೈಕಿ ಬೆಂಗಳೂರಿನಲ್ಲಿ 437, ಬಳ್ಳಾರಿ 62, ಹಾಸನ 44, ಚಾಮರಾಜನಗರದಲ್ಲಿ 41 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.