ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
Advertisement
ಪೂರ್ವದ ಅಲೆಗಳಿಂದ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಇಂದಿನಿಂದ 10ರವರೆಗೆ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ 10 ರವರೆಗೆ ವರುಣನ ಮಳೆಯಾಗಲಿದೆ ಎಂದಿದ್ದಾರೆ.
Advertisement
Advertisement
ಬೆಳಗಾವಿ, ಧಾರವಾಡ, ಹಾವೇರಿ, ಬಿಜಾಪುರ, ಗದಗನಲ್ಲಿ ಮಳೆಯಾಗೋ ಸಾಧ್ಯತೆ ಇದೆ. ಆದರೆ ಬೆಂಗಳೂರಿನಲ್ಲಿ ಇವತ್ತು ಮತ್ತು ನಾಳೆ ಹೆಚ್ಚಿನ ಮಳೆಯಾಗಲಿದೆ ಎಂದಿದ್ದಾರೆ.
Advertisement
ಹವಾನಮಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಮಳೆಗಾಲ, ಚಳಿಗಾಲ, ಬೆಸಿಗೆಗಾಲ ಎನ್ನುವ ಕಾಲಗಳ ಮಿತಿ ಬದಲಾದಂತಿದೆ. ವಾತಾವರಣದಲ್ಲಿ ಪ್ರತಿನಿತ್ಯ ವ್ಯತ್ಯಾಸವನ್ನು ಕಾಣುತ್ತಿದ್ದೇವೆ. ಬೆಳಗ್ಗೆ ಚಳಿ ಇದ್ದರೆ ಸಂಜೆ ಮಳೆಯಾಗುತ್ತದೆ ಅಷ್ಟೊಂದು ವಾತಾವರಣ ಬದಲಾಗುತ್ತಿದೆ.